ಹೊತ್ತು ಮುಳುಗುವ ಮುನ್ನ
ಹತ್ತು ಸುಳ್ಳಾಡುವೆನು
ಸತ್ತ ಕಾಮನೆಗಳಿಗೆ ಕಿಚ್ಚಿತ್ತು ಉಸಿರು
ಸುತ್ತ ಮುತ್ತಲ ಗೋಡೆ
ಮುತ್ತ ಸದ್ದಿಗೆ ಕಿವುಡು
ಆಗಲೇ ಪಿಸುಗುಡುವೆ ಆ ನಿನ್ನ ಹೆಸರು
ಬೆನ್ನಲ್ಲಿ ಬರೆದಿಟ್ಟ
ಗುಟ್ಟ ರಟ್ಟಾಗಿಸಲು
ಮುಚ್ಚಿಟ್ಟ ಕನ್ನಡಿಗೆ ವಿಕೃತಾನಂದ
ಎಲ್ಲ ಭಾವವ ಮೀರಿ
ನಿರ್ಭಾವುಕತೆ ತಾಳಿ
ಕೆನ್ನೆಗಂಟಿತು ಹನಿ ಜಾರಿ ಕಣ್ಣಿಂದ
ನಿನ್ನ ಬೆತ್ತಲ ನಾನು
ನನ್ನ ಬೆತ್ತಲ ನೀನು
ಸುತ್ತುವರಿದಿರಲಿಲ್ಲಿ ಬೆತ್ತಲಾರಿಲ್ಲ
ಮತ್ತೆ ಮತ್ತೆ ಮುಳ್ಳು
ಗಂಟೆ ಬಾರಿಸುತಿರಲು
ಸುಖ ನಿದ್ದೆಗೆ ತೆರಿಗೆ ಕಟ್ಟಬೇಕಿಲ್ಲ
ಗೊತ್ತು ಗೊತ್ತಿಲ್ಲದವು
ಗೊತ್ತಾಗುವವು ಗೊತ್ತು
ಮತ್ತು ಮತ್ತಷ್ಟು ಮತ್ತಲ್ಲಿ ಮಿಂದಾಗ
ಕೊಟ್ಟದ್ದ ಕೊಟ್ಟಂತೆ
ಪಡೆದದ್ದ ಪಡೆದಂತೆ
ಅನಿಸಿವುದು ನಮ್ಮೊಳಸ್ಮಿತೆಯ ಕೊಂದಾಗ
ಮುಕ್ತಾಯವಾಗಲಿದೆ
ಮುಕ್ತತೆಯ ಗಡಿ ಸೀಮೆ
ಮುನ್ನುಗ್ಗಲಿನ್ನೂ ಮತ್ತಷ್ಟು ಕದ ತೆರೆದು
ಕವನವೊಂದರ ಭಾಗ
ಇಬ್ಬರೂ ಕದಿಯೋಣ
ಅಂತ್ಯದಲಿ ಪ್ರಾಸಬದ್ಧ ಸಾಲ ಬರೆದು
-- ರತ್ನಸುತ
ಹತ್ತು ಸುಳ್ಳಾಡುವೆನು
ಸತ್ತ ಕಾಮನೆಗಳಿಗೆ ಕಿಚ್ಚಿತ್ತು ಉಸಿರು
ಸುತ್ತ ಮುತ್ತಲ ಗೋಡೆ
ಮುತ್ತ ಸದ್ದಿಗೆ ಕಿವುಡು
ಆಗಲೇ ಪಿಸುಗುಡುವೆ ಆ ನಿನ್ನ ಹೆಸರು
ಬೆನ್ನಲ್ಲಿ ಬರೆದಿಟ್ಟ
ಗುಟ್ಟ ರಟ್ಟಾಗಿಸಲು
ಮುಚ್ಚಿಟ್ಟ ಕನ್ನಡಿಗೆ ವಿಕೃತಾನಂದ
ಎಲ್ಲ ಭಾವವ ಮೀರಿ
ನಿರ್ಭಾವುಕತೆ ತಾಳಿ
ಕೆನ್ನೆಗಂಟಿತು ಹನಿ ಜಾರಿ ಕಣ್ಣಿಂದ
ನಿನ್ನ ಬೆತ್ತಲ ನಾನು
ನನ್ನ ಬೆತ್ತಲ ನೀನು
ಸುತ್ತುವರಿದಿರಲಿಲ್ಲಿ ಬೆತ್ತಲಾರಿಲ್ಲ
ಮತ್ತೆ ಮತ್ತೆ ಮುಳ್ಳು
ಗಂಟೆ ಬಾರಿಸುತಿರಲು
ಸುಖ ನಿದ್ದೆಗೆ ತೆರಿಗೆ ಕಟ್ಟಬೇಕಿಲ್ಲ
ಗೊತ್ತು ಗೊತ್ತಿಲ್ಲದವು
ಗೊತ್ತಾಗುವವು ಗೊತ್ತು
ಮತ್ತು ಮತ್ತಷ್ಟು ಮತ್ತಲ್ಲಿ ಮಿಂದಾಗ
ಕೊಟ್ಟದ್ದ ಕೊಟ್ಟಂತೆ
ಪಡೆದದ್ದ ಪಡೆದಂತೆ
ಅನಿಸಿವುದು ನಮ್ಮೊಳಸ್ಮಿತೆಯ ಕೊಂದಾಗ
ಮುಕ್ತಾಯವಾಗಲಿದೆ
ಮುಕ್ತತೆಯ ಗಡಿ ಸೀಮೆ
ಮುನ್ನುಗ್ಗಲಿನ್ನೂ ಮತ್ತಷ್ಟು ಕದ ತೆರೆದು
ಕವನವೊಂದರ ಭಾಗ
ಇಬ್ಬರೂ ಕದಿಯೋಣ
ಅಂತ್ಯದಲಿ ಪ್ರಾಸಬದ್ಧ ಸಾಲ ಬರೆದು
-- ರತ್ನಸುತ
No comments:
Post a Comment