ಕನ್ನಡಕ ಕಣ್ಣಿಗೆ ದಶಕೋತ್ಸವ

ಕಣ್ಣ ಗುಡ್ಡೆಯ ಅಗಲಿಸುತ್ತಾರೆ
ಒಳಗಿನ ಮರ್ಮಗಳನ್ನರಿಯಲು,
ಎಷ್ಟು ನರಗಳು ಅಡ್ಡಗಟ್ಟಿವೆಯೋ
ಒಂದು ಸ್ಪಷ್ಟ ನೋಟಕ್ಕೆ?!!
ತಿಳಿಯಲು ಆಪ್ತಲ್ಮಾಲಜಿ ಓದಬೇಕು,
ನನಗಿಲ್ಲ ಪುರುಸೊತ್ತು, ತಾಳ್ಮೆ;
ಕನ್ನಡಿಯಲ್ಲಷ್ಟೇ ನೋಡಿಕೊಳ್ಳಬಲ್ಲೆ
ಆಚೀಚೆ ಹೊರಳಿಸಿ ಕಪ್ಪು ಗೋಳಿಗಳ!!

ನನ್ನ ದೃಷ್ಟಿಯಲ್ಲಿ ದೋಷವಿದೆ;
ರೆಟೀನ ಕೋನವನ್ನ ಸರಿ ಪಡಿಸಲಿಕ್ಕೆ
ದಪ್ಪನೆಯ ಗ್ಲಾಸು ಧರಿಸಬೇಕಂತೆ
ಒಂದೊಳ್ಳೆ ಸ್ಟೈಲ್ ಕನ್ನಡಕ ಕೊಂಡು
ಶೋಕಿ ಮಾಡಬೇಕು!!

ಅಯ್ಯೋ; ಫ್ರೆಂಡ್ಸ್ ಗೇಲಿ ಮಾಡ್ತಾರೇನೋ?
ಹುಡುಗೀರಂತೂ ಕಣ್ಣೆತ್ತಿ ಸಹ ನೋಡೋದಿಲ್ಲ!!
ಕಣ್ಪಕ್ಕ ಒತ್ತಡಿ ಕಲೆಗಳು ಉಳಿದು ಬಿಟ್ರೆ?
ಹೀಗೆ ನಾನಾ ಪ್ರಶ್ನೆಗಳು ತೆಲೆಯಲ್ಲಿ;
ಕಣ್ಣು ನೆಟ್ಟಗಿದ್ರೆ ತಾನೆ ಎಲ್ಲ ತಿಳಿಯೋದು?
ಬಂದಿದ್ದು ಬರಲಿ ಅನ್ನೋ ಸಮಾದಾನ ಕೊನೆಯಲ್ಲಿ!!

ವಿಜ್ಞಾನ ಚೂರು ಪಾರು
ರಿಫ್ಲೆಕ್ಷನ್, ರಿಫ್ರಾಕ್ಷನ್ ಮಣ್ಣು ಮಸಿ 
ಕಣ್ಣಿನ ಅನಾಟಮಿ ಗಿನಾಟಮಿಗಳ
ಪರಿಚಯ ಮಾಡಿಸಿದ್ರೂ
ಸಣ್ಣ ತುರಿಕೆ ಆದ್ರೂ ಡಾಕ್ಟ್ರು ನೆನ್ಪಾಗೋದು
ತಪ್ಪದೇ ಇರೋದು ಬೇಜಾರಿನ ಸಂಗತಿ!!

ಹೇಗೋ ಹಾಗೆ ಧೈರ್ಯ ಮಾಡಿ
ಕಣ್ಣಿಗೊಬ್ಬ ಕಾವಲುಗಾರನ ಇಟ್ಟು
ಇಂದಿಗೆ ಹತ್ತು ವರ್ಷ ದಾಟಿ
ದಶಕೋತ್ಸವ ಆಚರಣೆಯಲ್ಲಿದ್ದೇನೆ!!

ಲೇಜರ್ರು-ಗೀಜರ್ರು ಅಂತೇನೋ ಮಾಡಿ
ಕನ್ನಡ್ಕ ಮಾಯ ಮಾಡೋ ತಂತ್ರಜ್ಞಾನ ಬಂದಿದ್ರೂ
ಇಷ್ಟು ವರ್ಷ ಜೊತೆಗಿದ್ದೋನ್ನ ದೂರ ಮಾಡಿ
ಕಟುಕ ಅಂತ ಅನ್ನಿಸ್ಕೊಳ್ಳೋ ಮನ್ಸಿಲ್ಲ,
ಕಾಂಟಾಕ್ಟ್ ಲೆನ್ಸ್ ಮೆತ್ಕೊಳೋ ಧೈರ್ಯ ಇಲ್ಲ;
ಎಲ್ಲವೂ ನನ್ನ ಚಿತ್ತ!!

                                             -- ರತ್ನಸುತ

Comments

  1. ನಿಮ್ಮ ಪಂಗಡದವರೇ ಆದ ನಾನೂ ಈಗ ಹತ್ತಿರ ಹತ್ತಿರ ದಶಮಾನೋತ್ಸವ ಆಚರಿಸುವ ಉಮೇದಿಯಲ್ಲಿದ್ದೇನೆ!
    ಈ ಸಾರಿ ಸಿಕ್ಕಾಗ ನಾವಿಬ್ಬರೂ 'ಬೈ ಟೂ ಕಾಫೀ' ಪಾರ್ಟೀ ಮಾಡೋಣ ಬಂನ್ರೀ ಭರತಮುನಿಗಳೇ! :-D

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩