ಒಂದೊಂದೇ ಬಚ್ಚಿಟ್ಟ ಮಾತು

ಒಂದು ಮನೆ, ಹುಲ್ಲಿನುಪ್ಪರಿಗೆ
ಒಂದು ಕಿಟಕಿ, ಮರದ ಕೋಲು
ಒಂದು ಬಾಗಿಲು, ತಗಡು ದ್ವಾರ
ಒಂದು ಸೀಮೆ, ಮುಳ್ಳ ತಂತಿ

ಒಂದು ಬಾವಿ, ಬತ್ತಿ ಪೂರ
ಒಂದು ದೀಪ, ಸಾವಿನಂಚು
ಒಂದು ಮಾತು, ಎರಡು ನುಚ್ಚು
ಒಂದು ನೆರಳು, ನೂರು ಹೆಜ್ಜೆ

ಒಂದು ನೋಟ, ಹತ್ತು ಕಣ್ಣು
ಒಂದು ಭೂಮಿ, ಆಳ ಮಣ್ಣು
ಒಂದು ರೆಕ್ಕೆ, ಒಂದು ಬದಿಗೆ
ಒಂದು ಭಾವ, ಆತ್ಮ ಕಥೆಗೆ

ಒಂದು ಮೌನ, ಸಾವಿರರ್ಥ
ಒಂದು ಮನಸು, ಕವಲು ದಾರಿ
ಒಂದು ಪ್ರೀತಿ, ಎರಡು ಹೃದಯ
ಒಂದು ಕವನ, ಒಂದು ಪ್ರಳಯ

ಒಂದು ಸದ್ದು, ಮರೆತ ಶ್ರವಣ
ಒಂದು ರಾಗ, ಬಿಟ್ಟ ಕೊರಳು
ಒಂದು ಹನಿಗೆ, ಒಂದು ಜಾಡು
ಒಂದು ಸ್ವಪ್ನ ದಟ್ಟ ಕಾಡು

ಒಂದು ಹಾಳೆ, ಹಲವು ಸಾಲು
ಒಂದು ನಾಳೆ, ಇಂದೇ ಬಾಳು
ಒಂದು ಸಿಗ್ಗು, ಮೊಗ್ಗು ಮೊಲ್ಲೆ
ಒಂದು ಉಸಿರ ಪಾಠ ಶಾಲೆ

ಒಂದು ಬಾಳು, ಒಂದು ಬೆಳಕು
ಒಂದು ಹಸಿವು, ಒಂದು ತುತ್ತು
ಒಂದು ನಿದ್ದೆ, ಒಂದು ಗೊರಕೆ
ಒಂದು ರಾಡಿ, ಒಂದು ಪೊರಕೆ!!

                            -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩