Friday, 3 April 2026

ಚಂದಿರನೇ ಚಂದಿರನೇ

ಚಂದಿರನೇ ಚಂದಿರನೇ

ಧರೆಗಿಳಿದು ಬರುತೀಯಾ
ಮಾತಾಡ ಬೇಕು ಚೂರು
ನಿನ್ನ ಏಕಾಂತವ
ನನ್ನ ಹೆಗಲೇರಿಸು
ಮೂಡೋ ಕವಿತೆಲಿ ಮಿಂದು ಸುಖಿಸು

ನೀ ಕರಗೋದು, ನಾ ಸೊರಗೋದು
ಇನ್ನು ಏತಕ್ಕೆ ನಮ್ಮಲ್ಲೀ ಒದ್ದಾಟ
ನೀ ನೆಲದತ್ತ, ನಾ ಮುಗಿಲತ್ತ
ಬರಿ ಕಣ್ಣೋಟದ ಮೌನ ಚೆಲ್ಲಾಟ
ಯಾರೋ... ಯಾರೋ..
ಯಾರೋ ಅದು ಯಾರೋ
ನಿನ್ನ ಮರ್ಮ ಬಲ್ಲವರಾರೋ
ಕೂಗೋಕೂ ಮುಂಚೆ
ನೀನಾಗೇ ಮನಸಿಗೆ ಜಾರೋ
ತುಟಿಗೊಂದು ನಗೆಯ ಕಲಿಸಿ ಹೋಗು
ಬೇರೇನೂ ಬೆಕಿಲ್ಲ..

ನೋಡಲ್ಲಿ ಗಡಿಯಾರ ಆಡೋ ಮಾಯದ ಆಟ
ಅವಸಾನ ಇರದಂತೆ ನಿಂತಲ್ಲೇ ಅದರ ಓಟ
ಅವಸರವೂ ಇಲ್ಲಿ ತಾಳ್ಮೆಯ ಬೆನ್ನೇರಿದೆ
ನೋಡಲ್ಲಿ ಗಡಿಯಾರ ಆಡೋ ಮಾಯದ ಆಟ
ಯಾರೋ... ಯಾರೋ..
ಹಗಲನ್ನು, ಇರುಳನ್ನು
ಕಂಡು ಹಿಡಿದವರಾರೋ
ಎರಡನ್ನೂ ಒಟ್ಟಾಗಿ
ಹೊಲೆದು ಬಿಟ್ಟವರಾರೋ
ಚಂದಿರನ ಮೊಗದ ಮಾಸಿದ ಕಲೆಯು
ಪ್ರೀತಿಯ ಗುರುತೇನು?..
*****************************************************************

ಒಂದೊಂದೇ ಹೆಜ್ಜೆನ ಇಟ್ಟು ಮೆಟ್ಟಿಲ ಮೇಲೆ
ಹತ್ತೋಣ ಏಣಿನ ಬಿಗಿಯಾಗಿ ಹಿಡಿದಿಡುವಲ್ಲೇ
ನಾನೆಂದೋ ಇದನು ವಿಚಾರಿಸಿ ಆಗಿದೆ
ಒಂದೊಂದೇ ಹೆಜ್ಜೆನ ಇಟ್ಟು  ಮೆಟ್ಟಿಲ ಮೇಲೆ
ಯಾರೋ... ಯಾರೋ..
ನೀನಾರೋ ನಾನ್ಯಾರೋ
ಬೆಳೆಯಿತು ಬಂಧವು ಹೇಗೋ
ಈ ಪ್ರೀತಿಯೆಂಬೋದು
ಮೂಡಲುಬಹುದಾ ಹೀಗೂ
ಆ ನಿನ್ನ ಮೊಗದ ಮಾಸಿದ ಕಲೆಯು
ಪ್ರೀತಿಯ ಗುರುತೇನು?..

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...