ಒಲವೇ.. ಒಲವಾದಾಗಲೇ ವಿಸ್ಮಯ
ಒಲವೇ.. ಒಲವೇ.. ಇದು ಬರಿದಾಗದ ಅಕ್ಷಯ
ಮೂಡೋ ಮುಂಗಾರು
ಜಾರೋ ಕಣ್ಣೀರು
ಕಾಯಿಸಿ, ಕಾಡಿಸಿ
ಮೋಹಿಸೋ ಮೋಡಿಯೇ ಸುಂದರ
ಒಲವೇ.. ಒಲವಾದಾಗಲೇ ವಿಸ್ಮಯಒಲವೇ.. ಒಲವೇ..
ಕಣ್ಣಂಚ ಕಾಡಿಗೆ
ತುಸು ಮಾಸದ ಹಾಗೆ
ತೀಡುತ್ತ ಗಲ್ಲ ತಾಕಲೇನು?
ತುಟಿಯನ್ನು ಸೋಕುವ
ಗಾಳಿ ಮುತ್ತನೊಂದ
ನಿನ್ನೆಡೆ ಹಾರಿಬಿಡಲೇನು?
ಬರದೆ ಸತಾಯಿಸೋ ನಿದಿರೆಯೂ ನಿನ್ನ (೨)
ಜೋಗುಳ ಬೇಡಿದೆ
ಚಂದ ಕೊರಳಿಂದ ಹೊರ ಹೊಮ್ಮಲು
ಒಲವೇ.. ದಣಿವ ನೀಗೋ ನದಿಯಾಗಿರು
ಒಲವೇ.. ಒಲವೇ.. ಮನಕೆ ನೀನೇ ಮೊದಲಾಗಿರು
ಬಿಡುಗಡೆಯಲ್ಲೂ
ನಾ ಸೆರೆಯಾಳು
ನನ್ನ ಆವರಿಸೋ
ಹೂ ಗಂಧ ನೀ ತಂದರೇನೇ ಹಿತ..
ಒಲವೇ.. ಒಲವಾದಾಗಲೇ ವಿಸ್ಮಯ
ಒಲವೇ.. ಒಲವೇ..
No comments:
Post a Comment