ನಾನಾರವ ನಾರವನೆನ್ನುವ
ನೀ ಇವನಾರವನೆಂದರೆ
ಈ ಇವ ನಿನ್ನವ ನಿನ್ನವನೆನ್ನುವನೆಂದಿಗೂ ಎನ್ನುವ
ನಾನೇ ನಿನ್ನವನೇ?
ನಾನಾರವನೆಂದರೆ ನಿನ್ನವನೆನ್ನುವೆ-
-ನೀ ಅವತಾರದಿ ನಿನ್ನೆದುರಾಗುವೆ-
-ನಾದರೆ ನಿನ್ನವನಾಗುವೆನಲ್ಲದೆ
ಬೇರೆ ಯೋಚಿಸೆನೆ!
ಈ ನೀರವವೇತಕೆ ಮಾತಿಗೆ ಸೋಲುವ
ಜೀವವ ತಾಕುವ ನಲ್ಮೆಯ ಯಾನವನೆಲ್ಲವ
ದಾಟವ ಕೈಯ್ಯನು ಚಾಚುವೆ
ಬಾರೆ ನನ್ನೊಡನೆ!
No comments:
Post a Comment