Friday, 3 April 2026

ಕೈ ಜಾರೊ ಓ ಸಮಯ

ಕೈ ಜಾರೊ ಓ ಸಮಯ 

ತುಸು ನಿಲ್ಲು, ತುಸು ನಿಲ್ಲು
ನಾನಿವಳ ಕೈ ಹಿಡಿದು
ಒಂದಿನಿತು ಕಳೆಯುವೆನು
ಹೇಳಬೇಕಿರೋ ವಿಷಯ
ಬಾಕಿಯಾಗಿದೆ
ಆದರೆ, ಬೀಳ್ಗೊಡು, ಹ್ಮ್ಮ್ಮ್ಮ್ಮ್
ಆದರೆ, ಬೇಗನೆ, ಬೀಳ್ಗೊಡು
(ಆಲಿಸು, ಆಲಿಸು, ಹ್ಮ್ಮ್ಮ್ಮ್ಮ್
ಆಲಿಸು, ಆಲಿಸು, ಆಲಿಸು...)

ಕಣ್ಣಲಿ ಒಂದು ಸಣ್ಣ ಕಂಬನಿ
ಜಾರಲು ಮೀನಾವೇಷ ಎಣಿಸಿದೆ
ಪ್ರಾಣವೇ ಹೋಗುವ ಹಾಗೆ
ಭಾರವಾದಂತಿದೆ ನನ್ನೆದೆ
ನಗುವೊಂದು ಮುಖವಾಡ
ಧರಿಸೊದು ಬಲು ಸುಲಭ
ಕರೆದಾಗ ಬರುವೆ ನಾ
ಕನಸಲ್ಲೂ ನಾ ಹಳಬ
ಅರೆಗಣ್ಣಿನಲ್ಲೇ ನೀ ನೆನೆ ನನ್ನನು
ಆದರೆ, ಬೀಳ್ಗೊಡು, ಹ್ಮ್ಮ್ಮ್ಮ್ಮ್
ಆದರೆ, ಬೇಗನೆ, ಬೀಳ್ಗೊಡು

ನೀಳವಾದಂತಿದೆ ಈ ನೀರವ
ಹೇಳಲಿ ಹೇಗೆ ಹೇಳು ಎಲ್ಲವ 
ನಂತರ ಸಿಗುವೆ ಅನ್ನುತ್ತಲೇ 
ಕಯ್ಯನು ಬಿಡದೆಯೇ ಸಾಗುವ 
ಚೂರಾದ ಕನ್ನಡಗೂ 
ಕೂಡೋಕೆ ಬಿಗುಮಾನ 
ನೀನೊಂದು ನಾನೊಂದು 
ಬೆಸೆಯುತ್ತಾ ಹೋಗೋಣ 
ಒಂದುಗೂಡಲಿ ಅಲ್ಲೂ ನಮ್ಮ ಬಿಂಬವು 

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...