ನೀ ಬರುವ ದಾರಿಯಲಿ
ಹೂಗಳ ಹಾಸಿಡಲೇ
ನಿನ್ನೆದುರು ಕುಣಿಯುವೆನು
ನನ್ನೊಳ ಮನಸಿನಲೇ
ಹಠ ಹಿಡಿದ ಉಸಿರು
ಸದಾ ನಿನ್ನ ಹೆಸರು
ದಾಖಲಾಗಿಸಿದೆ ಜೀವ ನಿನಗೆ
ಮೀಸಲಾಗಿರಲು ಹೇಗೆ ನಟಿಸಲಿ..
ಚಂದ ಚಂದ ಮುತ್ತುಗಳ ಆರಿಸಿ
ಒಂದರಿಂದೆ ಒಂದ ಹಾಗೇ ಪೋಣಿಸಿ
ಕಟ್ಟುವೆಯಾ ಮೆಲ್ಲಗೆ
ಅಂದವೆಲ್ಲ ನಿನ್ನದಾಗಿ ಹೋಗಿದೆ
ಒಂದು ದೃಷ್ಟಿ ಬೊಟ್ಟು ಇಟ್ಟು ನೋಡಿದೆ
ಬುದ್ಧಿ ಇಲ್ಲ ನನಗೆ
ಬರುವೆಯಾ ಹೇಳು ಕರೆವೆಡೆಯೆಲ್ಲ
ಹಿಡಿಯುತ ಕಿರುಬೆರಳು
ಬದುಕುವ ಆಸೆ ಒರಗುತ ಹಾಗೇ
ನಿನ್ನಯ ಮಡಿಲಿನೊಳು..
ಓ ಇನಿಯ
ಕೇಳಿದೆಯಾ
ನನ್ನೆದೆ ಸರಿಗಮವ
ಯಾರಿಗೆ ನಾ
ವಿವರಿಸಲಿ
ಈ ಪರಿ ಅನುಭವವ
ಪ್ರತಿ ದಿನವೂ ಹೊಸತು
ನಿನ್ನ ನೆರಳ ಬೆರೆತು
ಸಾಟಿಯಿಲ್ಲದಿರೋ ವೇಘ, ವೇಘ
ಮೇಘವಾಗುವೆನು ಕರಗಿ ಹೋಗುತ...
No comments:
Post a Comment