Friday, 3 April 2026

ಸಂದೇಶ ಬಂತೀಗ

ಸಂದೇಶ ಬಂತೀಗ

ಸಂತೋಷ ತಂತೀಗ
ವಿಷೇಶ ಏನಿಲ್ಲ
ಅದೇ ಕಾಡೋ ರಾಗ 
ನೀ ಬರುವೆ ಯಾವಾಗ
ನೀ ಬರುವೆ ಯಾವಾಗ
ಸಿಗೋಣ ಯಾವಾಗ
ನೀನಿಲ್ಲದ ಲೋಕ 
ಶೂನ್ಯ ಶೂನ್ಯನೇ 
ಓ.. ಓ..ಓ..

ಹೇ ಬೀಸೋ ಗಾಳಿಯೇ ಆಲಿಸು 
ನನ್ನುಸಿರ ಬಸಿಯುತ ಗೀಚುವೆ
ಈ ಕಾಗದ ಕಳುವಾಗದೆ 
ಕಾಪಾಡೆಯಾ ನೀ..
ನಾ ಕ್ಷೇಮ ನೀನು ಕ್ಷೇಮವೇ 
ಅನ್ನೋ ಸಾಲೇ ಹಿತವಾಗಿದೆ
ಪ್ರತಿ ಪದ ಏನೋ ಕಥೆ 
ಹೇಳೋ ಥರ ಭಾಸವಾಗಿದೆ..

ನಾ ಮರಳಿ ಬಂದಾಗ 
ಅಂಗಳದಿ ನಿಂತಾಗ
ತೋರಣ ತಂಪಲ್ಲಿ 
ಮಲ್ಲಿಗೆ ಕಂಪಲ್ಲಿ 
ನಿನ್ನ ನೆರಳೇ ಅಲ್ಲಿ
ಬೆನ್ನಿಗೆ ನಿಂತಂತೆ
ಜೀವ ಬಿಗಿದ ಹಾಗೆ
ಈ ದೂರ ಬೇಡ
ಸಾಕು ಅಂದಂತೆ..

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...