ಕಣ್ಣಲ್ಲಿ ಕಣ್ಣಿಟ್ಟು ಕರೆದರೆ
ಕದ್ದೋಡಿ ಕಳುವಾಗುವೆ
ನಿಂತಲ್ಲೇ ನಾ ನಿಂತೆನಾದರೂ
ನೀನೆಲ್ಲೋ ಮರೆಯಾಗುವೆ
ಎಲ್ಲೆಂದು ನಾನಿನ್ನ ಹುಡುಕಲಿ
ಸೋತಂತೆ ಶರಣಾಗುವೆ
ಕಣ್ಣಲ್ಲಿ ಕಣ್ಣಿಟ್ಟು ಕರೆದರೆ
ಕದ್ದೋಡಿ ಕಳುವಾಗುವೆ
ಕಾರಂಜಿ ನಿನ್ನನ್ನು ನೋಡಲು
ಚಿಮ್ಮುತ್ತ ಹೊರ ಹೊಮ್ಮಿದೆ
ನಾನಂಜಿ ಮರೆಯಲ್ಲಿ ಇಣುಕಿದೆ
ಏನೊಂದೂ ಮಾತಾಡದೆ
ಕ್ಷಣವೊಂದು ಸರಿದಿತ್ತೋ ಏನೋ
ಹಿಂತಿರುಗಿ ಕಂಡಾಗ ನಾನು
ನೀನಲ್ಲಿ ನಾಪತ್ತೆಯಾಗಲು
ಹುಡುಕಾಟ ನಿಲ್ಲುತ್ತಾ ಏನು
ನೀನನ್ನ... ನಾನಿನ್ನ...
ಕೊಂಡಾಡಿಕೊಳ್ಳುತ್ತ ಕುಳಿತರೆ
ಈ ಲೋಕ ಬೆರಗಾಗಿ ನೋಡಲಿ..
ಎದುರಾಗಿ ಏನಾಯಿತೆನ್ನುವೆ
ಏನೆಂದು ನಾ ಹೇಳಲಿ
ಮಾತೆಲ್ಲ ಕೊರಳಲ್ಲೇ ಸಿಲುಕಲು
ತುಟಿಯಲ್ಲಿ ನಗು ಮೂಡಲಿ
ಒಂದೊಂದೇ ಸಂದೇಹ ಬೇಗನೆ
ತನ್ತಾನೇ ಬಗೆಹರೆಯುವಂತೆ
ನನ್ನಂತೆ ನಿನ್ನಲ್ಲೂ ಘರ್ಷಣೆ
ಇನ್ನೇನು ಒಲವಾಗುವಂತೆ
ನೀ ನಲ್ಲೆ... ನಾ ನಲ್ಲ
ಬೇರೇನೂ ಬೆಕಿಲ್ಲ ನಮಗಿದೋ
ಈ ವೇಳೆ ಚಿರಕಾಲ ಉಳಿಯಲಿ...
No comments:
Post a Comment