ನೀನಿರೆ ಜೊತೆ ಜಗ ಮರೆಯುವೆ
ನೀನಿರೆ ಜೊತೆ ಝಗಮಗಿಸುವೆ
ನೀನೆರೆ ಜೊತೆ ನಾ ಬದುಕುವೆ
ನೀನಿರೆ ಜೊತೆ ಅನುಭವ ಸಿಹಿ
ನೀನಿರೆ ಜೊತೆ ಒಲವಿಗೆ ಸಹಿ
ನೀನಿರೆ ಜೊತೆ ನಾ ಬದುಕುವೆ
ಉಂಟಾಗಿದೆ ಹೊಸ ಥರ ಭಾವನೆ
ನೀನು ಸೋಕಲು
ನಾವಾಗುವ ವಿನೂತನ ಪ್ರೇಮಿಗಳಾಗಿ
ದಾಖಲು
ಶುರುವಾಗಿದೆ, ಶುರುವಾಗಿದೆ
ಅನುರಾಗವು ಶುರುವಾಗಿದೆ
ಅರಿವಾಗಿದೆ, ಅರಿವಾಗಿದೆ
ನಿನ್ನೊಂದಿಗೆ ಒಲವಾಗಿದೆ.. ಹಿತವಾಗಿದೆ!
ನೀನೆಂದರೆ ಮನಸಿಗೆ ಸಡಗರ
ಈ ಜನುಮ ಬರೆದಿಡುವೆ ನಿನಗೋಸ್ಕರ
ಕನಸಲ್ಲೂ ಕಾಡೋದು ನಿಂದೇ ಸ್ವರ
ಕಳುವಾಗೋಕೂ ಮುನ್ನ ಕೊಡು ಎಚ್ಚರ
ನಿಂತಲ್ಲೇ ನಾ ಮುಟ್ಟುವೆ ಆಗಸ
ನಕ್ಕಾಗ ನಾನಾಗುವೆ ಪರವಶ
ಸವಿಯೋದಕೆ ಸಜ್ಜಾಗಿರುವೆನು
ಕೊಡಲೆಂದಾದರೆ ನೀ .. ಕಡು ವಿರಸ
ನೀನಿರೆ ಜೊತೆ ಪಯಣವು ಸವಿ
ನೀನಿರೆ ಜೊತೆ ಆಗುವೆ ಕವಿ
ನೀನಿರೆ ಜೊತೆ ನಾ ಬದುಕುವೆ
ಹೂಗಂಧ ಹೊತ್ತಿರೋ ತಂಗಾಳಿ ನೀ
ಹೋದಲ್ಲಿ ಬಂದಲ್ಲಿ ಮುಧುರಾಗಿಣಿ
ನಿನ್ನಂದವ ಕಂಡು ಮತ್ತೇರಲು
ಮನ ತೂರಾಡಿ ಮೋಹಕೆ ಶರಣಾಗಿದೆ
ಆಗಷ್ಟೇ ಕಟ್ಟಿದ ಹಾಲ ಕೆನೆ
ನಿನ್ನ ಕೆನ್ನೆಯ ಎದುರು ಸೊನ್ನೆ ಕಣೆ
ನಾ ತಂದ ಕಾಲ್ಗೆಜ್ಜೆಯ ಕುಣಿಸಲು
ನಿನ್ನ ಪಾದಕ್ಕೆ ಬಳಸಿ.. ತೊಡಿಸುವೆನೆ
ನೀನಿರೆ ಜೊತೆ ಜಿನುಗಿದೆ ಖುಷಿ
ನೀನಿರೆ ಜೊತೆ ಬಯಕೆಯ ಬಿಸಿ
ನೀನಿರೆ ಜೊತೆ ನಾ ಬದುಕುವೆ..
No comments:
Post a Comment