ಅಂಬರದೆಡೆಗೆ ಗಮನ ಹರಿಸಿ
ತಾರೆಗಳನ್ನು ಬೆರೆಸಿ
ರೇಖೆಗಳನ್ನು ಎಳೆದು ಕೂಡಿ
ನಿನ್ನ ರೂಪವ ಬಿಡಿಸಿ
ಆ ವಿಸ್ಮಯ ಚಿತ್ತಾರವ
ನಿನ್ನ ಕಣ್ಣ ಎದುರು ಇರಿಸಿ
ಭುಜವ ಮೀರಿ ಬೆಳೆವ
ಹೆಗಲ ಮೇಲೆ ಆಡಿದ ಮಗನು
ನಿನ್ನ ಹೊತ್ತು ಕುಣಿವ
ಏನಾದರೂ ನೀನೇ ಗುರು
ನಾನೆಂದಿಗೂ ಸಣ್ಣ ಅಣುವು
ಸರ್ವಸ್ವವನೂ ನನಗೆ ಕೊಡುವ
ಮನಸು ನಿನದು ಹೇಗೆ?
ಯಾರೇ ಎಷ್ಟೆ ಪ್ರೀತಿ ಕೊಡಲಿ
ಸಮವಾಗುವರೇ ನಿನಗೆ?
ಎದೆಯಲಿ ಗುಟ್ಟಾಗಿಯೇ
ಅನುದಿನ ನಿನ್ನ ಜಪವೇ
ಅಪ್ಪ ನಿನಗೆ ಯಾವ ಸಿರಿಯು
ಸಿರಿಯೇ ಅನಿಸದು ಏಕೆ?
ಮಗನ ಖುಷಿಯೇ ಸಿರಿಯೆನ್ನುವೆ ನೀ
ಇಲ್ಲವೇ ಬೇರೆ ಬಯಕೆ?
ಕಣ್ಣಂಚಲಿ ನೀ ತಾಳುವ
ಆ ಕಂಬನಿ ಕತೆಗಳೇನು?
ಯಾರಿಂದಲೂ ನಾ ಸೋಲುವುದಿಲ್ಲ
ನಿನ್ನ ಮಾತಿಗೆ ಸೋತೆ
ಬೆಳಕೇ ಇದರ ದಾರಿಯ ನಡುವೆ
ನೀನೇ ಬೆಳಗೋ ಹಣತೆ
ಇಡೀ ಜಗ ತಪ್ಪೆಂದರೂ
ನಿನ್ನ ಹಠ ನನ್ನ ಜೊತೆಗೆ
ಹೇಳೋಕೆ ತುಂಬಾನೇ ವಿಷಯ
ಹೇಳದೆ ಹೋದೆನು ಏನೂ
ನೀನು ನಿನ್ನ ಅಪ್ಪನ ಹಾಗೆ
ಅಂದರೆ ಹಿಗ್ಗುವೆ ನಾನು
ನಾವಿಬ್ಬರೂ ಒಂದೆನ್ನುವ
ಸ್ವಭಾವದ ಸನ್ನೆ ನೂರು...
No comments:
Post a Comment