ಸಿಕ್ಕರೆ ನೀನಾಗಿ
ಸಕ್ಕರೆ ಜೇನಾಗಿ
ಅಕ್ಕರೆ ಮಾತನ್ನು
ಆಡುವೆ ಹಿಂಬಾಲಿಸಿ
ಯಾರಿಗೆ ಹೇಳೋದು
ಈ ಪರಿ ಹಾಳಾದೆ
ಹತ್ತಿರ ನೀ ಬಂದು
ಹೋಗೆಯಾ ಕಣ್ಣಾಯಿಸಿ
ಕಾರಣ ಇನ್ನೇನಿದೆ
ಪ್ರೀತಿಗೆ ಸೋತಾಗಿದೆ
ಇಷ್ಟೆಲ್ಲಾ ಆಗಿದ್ದು ನಿನ್ನಿಂದಲೇ
ಮಿಂಚಾಗಿ ನೀ ನಿಂತೆ ಕಣ್ಣಂಚಲೇ..
ಸದಾ ಕಾಲ ಪ್ರೀತಿಯಲ್ಲಿ
ಹೊಸ ಬಣ್ಣವನ್ನು ಚೆಲ್ಲಿ
ಖುಷಿಯಲ್ಲಿ ಬಾಳಿನ್ನೂ ಹೊಸತಾಗಿದೆ
ಕಿಸೆಯಲ್ಲಿ ಆಸೆ ಹೊತ್ತು
ಕೋಡೋಕಂತ ಕಾದ ಮುತ್ತು
ಮುಂದೂಡೋ ಹೊತ್ತಲ್ಲೇ ಹಿತವಾಗಿದೆ
ಓ.. ಕಳುವಾದ ನನ್ನನ್ನು ಮತ್ತೆ
ಪತ್ತೆ ಮಾಡಿದೆ
ನಿನ್ನ ಸೇರಿ ಸುಮಾರು ಬಾರಿ
ಮಿತಿ ಮೀರಿದೆ
ನಗುವೊಂದು ಸರಾಗವಾಗಿ ತುಟಿಗಂಟಿದೆ
No comments:
Post a Comment