Friday, 3 April 2026

ಇರಬಾರದೇನು ಇರುವಂತೆ ತಾನು

ಇರಬಾರದೇನು 

ಇರುವಂತೆ ತಾನು 
ಉಸಿರೊಂದು ಜೀವದೊಳಗೆ 
ಕರೆವಾಗಲೆಲ್ಲ 
ಬರುವಂಥ ಚಂದ 
ಕನಸೊಂದು ಕಣ್ಣಿನೊಳಗೆ 
ಬರಲಿಲ್ಲವೇಕೆ 
ಆ ತಿರುವಿಂಚಿನಲ್ಲುಳಿದು
ಕಾದೆ ನಿನಗೆ 
ಎಲ್ಲಕ್ಕೂ ಮಿಗಿಲು 
ಮೊಹಕ್ಕೆ ಕಡಲು 
ದಡವೇಕೆ ಬೇಕು ನನಗೆ 
ಜೋಪಾನ, ಜೋಪಾನ 
ಓ ಮನಸೇ ಜೋಪಾನ 
ಎಡವೋದು ಬೀಳೋದು 
ಸಹಜಾನೇ ಜೋಪಾನ
ಪ್ರೀತಿ ಅನ್ನೋದು 
ನೋವು ಅಂತಾನಾ?

ಇದು ಪುಕಾರಲ್ಲ 
ಬರಿ ಕರಾರಲ್ಲ 
ಜನುಮಾಂತರ ನಂಟು 
ಸರಿ ಮಾಡೋದಕ್ಕೆ 
ತಪ್ಪಾಗೇ ಇಲ್ಲ 
ಇಲ್ಲೆಲ್ಲವೂ ಉಂಟು 
ಅದು ಇದು ಅಂತ 
ಹೊತ್ತಾಗೋ ಮುನ್ನ 
ನಾ ಹೇಳಬೇಕು ಎಲ್ಲವ 
ಬದಿಗಿಟ್ಟು ಸಿಟ್ಟು 
ಕೂಡಿಟ್ಟು ಒಟ್ಟು 
ಮಾಡೋಣ ನಮ್ಮ ಒಲವ 
ಜೋಪಾನ, ಜೋಪಾನ 
ಓ ಮನಸೇ, ಜೋಪಾನ 
ಹಾಲಾಗಿ ಕಾಣೋದು 
ಎಂದೆಂದೂ ಹಾಲೇನಾ?
ಬಾಳು ಅನ್ನೋದು 
ಗೋಳು ಅಂತಾನಾ?

ನೂರಾರು ಬಾರಿ 
ನಾ ಕೂಗಿಕೊಂಡೆ 
ಮನಸಲ್ಲೇ ನಿನ್ನ ಹೆಸರ 
ಆರೇಳು ಹೃದಯ 
ಬೇಕಾಗಬಹುದು 
ಆಗೋಕೆ ಪ್ರಾಣ ಹಗುರ 
ಕಣ್ಣೋಟದಲ್ಲೇ 
ನೀ ಚಿವುಟಿ ಹೋದೆ 
ಆಗಾಗ ಮೂಡೋ ಚಿಗುರ 
ನೀ ಬೇಡವೆಂದ 
ಬೆನ್ನಲ್ಲೇ ಬೇಕು 
ಅನಿಸೋದು ಎಂಥ ಸಮರ 
ಜೋಪಾನ, ಜೋಪಾನ 
ನನ್ನೊಲವೇ ಜೋಪಾನ 
ಈಗ ದೂರಾಗಿ 
ಮುಂದೆಲ್ಲೋ ಸೇರೋಣ 
ಹೂವು ಅನ್ನೋದು 
ಮುಳ್ಳು ಅಂತಾನಾ?

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...