ನೀನಿಲ್ಲದೇ ಏನಿದೆ ಬಾಳಲಿ
ಏತಕೋ ಈಚೆಗೆ ಕಾಲವು ಸಾಗದೇ
ಬಾಕಿ ಏನಾದರೂ ನಂತರ ಆಗಲಿ
ಬೇಗನೆ ನೀ ಬಳಿಸಾರಬೇಕು
ಓ ಪ್ರೇಮ, ನೀ ದೂರಾಗಿ ಚೂರಾಗುವೆ
ನೀ ಕಂಡಾಗ ಪಾರಾಗುವೆ
ಇದೇ ರೀತಿ ಒದ್ದಾಟವು ಪ್ರೀತಿಗೆ ಮಾತ್ರವೇ
ಒಂದು ಸಾಲಲ್ಲೇ ಹೇಳು
ನಿನ್ನೆಲ್ಲ ಭಾವ
ಆಗದೇನು?
ಬಂದು ಏಕಾಂತದಲ್ಲಿ
ನೀ ಶಾಮೀಲಾಗು
ಒಂಟಿ ನಾ
ನಿನ್ನಲಿ ಹೇಳದ ಸಾವಿರ ಅಸೆಗೆ
ಹಾಸುವೆ ಈಗಲೇ ಹೂವಿನ ಹಾಸಿಗೆ
ನೀಡು ಬಾ ನಿನ್ನ ಹಸ್ತಾಕ್ಷರ...
ದಾರಿಯೇ ಕಾಣದಾಗಿ
ಕಂಗಾಲು ನಾನು
ಕೈಯ್ಯ ಚಾಚು
ದೂರದ ಊರಿನತ್ತ
ನಮ್ಮ ಪಯಣ
ಸಾಗಲಿ
ಯಾರಿಗೂ ಕಾಣದ ರಾತ್ರಿಯ ಬಾನಲಿ
ಮೂಡುವ ತಾರೆಯ ನೋಡುವ ಹೊತ್ತಲಿ
ಆಡುವ ಹಾಡಿದು ಸುಂದರ...
No comments:
Post a Comment