Friday, 3 April 2026

ಕಡಲಾಳದಲ್ಲಿ ನಾನು

ಕಡಲಾಳದಲ್ಲಿ ನಾನು

ಅಲೆಯಾಗಿ ಓಡುವೆಯೇನು
ಮುಗಿಲನ್ನು ಸೇರಿಕೋ ಬೇಗ
ಬೆನ್ನ ಹಿಂದೆ ನಾ ಬರುವೆ..
ಬಿಡುಗಡೆ ನೀಡದೆ
ಸುರಿಮಳೆಯಾಗಿದೆ
ಅನುದಿನ ಸೋಲುವ
ಕನಸದು ನಿನ್ನದೇ
ಕಣ್ಣು ಕಣ್ಣ ಸೇರಿಸುವ ಸೇತುವೆಗೆ
ಕದ್ದು ಮುಚ್ಚಿ ನೋಡೋ ಸುಖ ಬೇಕಾಗಿದೆ
ಸಿಕ್ಕಿ ಬೇಳಬೇಕು ಬೀರೋ ಕಳ್ಳನಗೆ
ಹೆಚ್ಚು ಕಾಲ ದೂಡಬೇಡ ಪ್ರೀತಿಸದೆ
ನೂರಾರು ಭಾವದ
ಹೂಗುಚ್ಚ ನಿನ್ನಲಿ
ನಾನಾಗಲೇ ಸಖಿ
ಬಾಡದಿರೋ ಗುರಾಭಿ ಹೂ..
ಬಿಡುಗಡೆ ನೀಡದೆ
ಸುರಿಮಳೆಯಾಗುವೆ
ಅನುದಿನ ನಿನ್ನನೇ
ಕನಸಲೂ ಕಾಣುವೆ

ಮುಂಜಾನೆಯ ಹೊಂಬೆಳಕ
ಎದೆಗೊತ್ತಿ ಎಚ್ಚರಿಸು
ಹಾಗೇ ಮುಂದುವರಿಯುತಲಿ.. ಮೋಹಿಸಿ..
ಆಸೆಗಳ ಬಣ್ಣ ಬಣ್ಣ ಬೀಸಣಿಕೆ
ನಿನ್ನೆಡೆಗೆ ಗಾಳಿಯನ್ನು ಬೀಸುತಿದೆ
ಇದ್ದುಬಿಡಬೇಡ ಹಾಗೆ ನೋಡದೆಯೇ
ಅಂಗೈಯ್ಯಲ್ಲೇ ಜೀವವಿನ್ನೂ ಕಾಯುತಿದೆ
ಕಾರಂಜಿ ಮೂಡಿದೆ
ನೀ ಹಾಗೆ ನಾಚಲು
ರಂಗೋಲಿಯಾಗುವೆ
ತೆರೆ ಮನದ ಮುಂಬಾಗಿಲು....

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...