ಹಸಿ ಹಸಿ ಮನದ ಒಳ ವಿಷಯ
ನಿನದೇನೇ ಸಖಿ
ಅತಿ ಸುಲಭಕೆ ಸೋಲುತ ನಿನಗೆ
ಶರಣಾದೆ ಸಖಿ
ಕುದಿಯುವ ಬಯಕೆಗಳನು ನೀನೇಶಮನಿಸ ಬೇಕು...ಓ
ಅಳಿದುಳಿದಿರೋ ನನ್ನನು ಪೂರ
ಆವರಿಸು ಸಖಿ..
ನೀ ಸಮೀಪಿಸಲು
ಬಡಿದಾಡುವುದೀ ಹೃದಯ ಸದಾ
ನೀ ನಸುನಗುತಿರಲು
ಕುಣಿದಾಡುವುದೀ ಹೃದಯ ಸದಾ..
ಏನಾದರೂ ಮಾತಾಡೆಯಾ
ಈ ಮೌನವು ಬೇಡಿದೆ ವಿರಾಮ
ಹೇಗಿದ್ದರೂ ಸ್ವೀಕಾರವೇ
ನೀನಾಡೋ ಮಾತೇನೆ ಅಂತಿಮ
ಕಾರಣ ನೀಡದೆ
ಹತ್ತಿರ ಬಾ ಹತ್ತಿರ.. ಓ..
ನೀ ಸಮೀಪಿಸಲು
ಕುಣಿದಾಡುವಿದೀ ಹೃದಯ ಸದಾ
ನೀ ಪಿಸುಗುಡುತಿರಲು
ಕದ್ದು ಆಲಿಸಿದೆ ಹೃದಯ ಸದಾ..
ನಿಂತಲ್ಲಿಯೇ ನಿಲ್ಲುವುದು
ನಿನ್ನಂದವ ಕಂಡು ನನ್ನ ಪ್ರಾಣ
ಹೀಗೇತಕೋ ಒದ್ದಾಡುವೆ
ನೀ ಸೋಕಲು ಅದುವೆ ಜೀವ ದಾನ
(ನೀನಿದ್ದರೇನೇ ಈ ಜೀವನ)
ಪಂಜರ ದಾಟುವ
ಹತ್ತಿರ ಬಾ ಹತ್ತಿರ.. ಓ..
No comments:
Post a Comment