Friday, 3 April 2026

ಮುಂದೆ ಸಾಗೋ ಕಾಲದೊಂದಿಗೆ

ಮುಂದೆ ಸಾಗೋ ಕಾಲದೊಂದಿಗೆ 

ನಮ್ಮ ಜೀವನ 
ಯಾರು ಎಲ್ಲಿ ಹೇಗೆ ಸಿಗುವರೋ
ಏನೋ ಕಾರಣ 
ಆಕರ್ಷಣೆ ನೂರಾರಿವೆ 
ತೆರೆದಾಗಲೇ ಒಳಗಣ್ಣನು 

ತಲೆ ಬಾಗಬೇಕಂತೆ ನೋವು 
ಸಂತೋಷವಾಗಿರಲು ನಾವು 
ಮರೆತಾಗಲೇ ವಿರಸವನ್ನು 
ಸಿಹಿಯಾಯಿತು ಬಾಳ ಬೇವು 
(ಹತ್ತಾರು ದಾರಿ ಎದುರಾಗುವಾಗ 
ಜೊತೆಯಾಗಿ ನಿಲ್ಲೋರು ಬೇಕು)
ಹೂಡೋಟವೇ ಎಲ್ಲೆಲ್ಲಿಯೂ 
ತೆರೆದಾಗಲೇ ಒಳಗಣ್ಣನು 
ಆಕರ್ಷಣೆ ನೂರಾರಿವೆ 
ತೆರೆದಾಗಲೇ ಒಳಗಣ್ಣನು..

ಬೆಳೆಸುವ ಬಾ ಸ್ನೇಹ ಸೇತು 
ಮಾತಾಡುವ ಹೆಚ್ಚು ಕೂತು 
ದಿಕ್ಸೂಚಿಯಾದ ನೆರಳನ್ನು ಮೀರಿ 
ಕಳುವಾಗುವ ಆಸೆಯೇಕೆ?
(ಮುಚ್ಚು ಮರೆ ಏನೂ ಬೇಡ 
ಖುಷಿ ನೀಡಲಿ ಒಲವ ಕಂತು)
ಬಿರುಕೆಲ್ಲವೂ ಮರೆಯಾದವು
ತೆರೆದಾಗಲೇ ಒಳಗಣ್ಣನು 

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...