ಮೆಲ್ಲಗೆ ತೆರೆಯಲಿ ಎರಡೂ ಮನಸಿನ ದ್ವಾರ
ಹತ್ತಿರ ಆಗುವ ಮಾತು ಉಳಿಯಲಿ ದೂರ
ಮೊದಲ ನೋಟ ಬೆರೆತಾಗ
ಗಾಢವಾಯಿತು ಅನುಬಂಧ
ತೊದಲುವಾಗ ಏನೇನೋ
ಹೇಳಲಾಗದ ಆನಂದ
ಜೊತೆಗೆ ಕಳೆದ ಮಧುರ ಸಮಯ
ಕ್ಷಣವೆಲ್ಲವ ಸೇರಿಸಿ ಹಾಡುವ ಹಾಡೊಂದ
ಈ ಕಾಡೋ ಮಳೆಯಲಿ
ನೆನೆಯುವ ಆ ಖುಷಿಯೇ ಬೇರೆ
ಈ ಕಾಡೋ ಮಳೆಯಲಿ
ಮನಸಿದು ಸೂರೆ..
ನಾ ಕುಳಿತಿರುವಲ್ಲೇ
ನೀ ನೆನಪಿಗೆ ಬಂದಾಗ
ಆ ನೆನೆಪುಗಳ ಕವಿತೆಗೆ ನಿನ್ನ ಹೆಸರಿಡುವೆ
ನಾವಿಬ್ಬರೂ ಬೆರೆತ
ಆ ಜಾಗವೇ ಕುರುಹಾಗಿ
ನಾಳೆಗೆ ಒಲವ ಗುರುತುಗಳಾಗಿ ಬರೆದಿಡುವೆ
ಪ್ರತಿ ಪದ ತಲುಪಿದ
ಹೃದಯವಿನ್ನೂ ನಿನದೇನೇ
ಬರಹಕೆ ನಿಲುಕದ ಚಂದ ಭಾವನೆ
ಗರಿಗೆದರಿದ ಮನಸಿಗೆ ಜಿಗಿಯುವ ಬಯಕೆಯು
ಹೇಗೆ ತಡೆದಿಡಲಿ?
ಈ ಕಾಡೋ ಮಳೆಯಲಿ
ನೆನೆಯುವ ಆ ಖುಷಿಯೇ ಬೇರೆ
ಈ ಕಾಡೋ ಮಳೆಯಲಿ
ಮನಸಿದು ಸೂರೆ..
ಓಲೈಸುವೆಯೇನು
ಹಾತೊರೆಯುತ ನನ್ನನ್ನು
ನಾ ಪ್ರತಿ ಇರುಳು ಧಾವಿಸಿ ಬರುವೆ ಕನಸಲ್ಲೂ
ಈ ಥರ ಉಸಿರಲ್ಲಿ
ಯಾರನೂ ಬೆಸೆಯದ ನಾನು
ನಿನ್ನಲೇ ಬೆರೆತು ಹೋಗುವೆ ಒಪ್ಪಿಗೆಯಾ ಹೇಳು
ತಳಮಳ ತರಿಸುತ ತಣಿಸುವಾತ ನೀನೇನಾ
ಅಧರಕೆ ಸರಿಗಮ ಕಲಿಸಲೇ ದಿನ
ಹೊಸ ಅಲೆಯಲಿ ಚಲಿಸುತ ಬರುವೆನು ಬಳಿಯಲಿ
ದಡದಲೇ ಕಾಯುವೆಯಾ..
ಈ ಕಾಡೋ ಮಳೆಯಲಿ
ನೆನೆಯುವ ಆ ಖುಷಿಯೇ ಬೇರೆ
ಈ ಕಾಡೋ ಮಳೆಯಲಿ
ಮನಸಿದು ಸೂರೆ..
No comments:
Post a Comment