Friday, 3 April 2026

ನಿನ್ನಂದ ಕಂಡ ಮೇಲಿಂದ

ನಿನ್ನಂದ 

ಕಂಡ ಮೇಲಿಂದ 
ಲೋಕವೆಲ್ಲ ಅಂದವಾಗಿದೆ 
ಏನನ್ನು 
ಹೇಳಬೇಕೀಗ 
ಮಾತು ಕೂಡ ಮೌನ ತಾಳಿದೆ 
ಮನಸ್ಸು ತುಂಬಿಸೋ 
ವಿಚಾರ ನಿನ್ನದು 
ಕನಸ್ಸಿನಲ್ಲೂ ಮಾಡೋದು
ನಿನ್ನ ಜಪ 
ಹತ್ತಾರು ಬಾರಿ 
ಪ್ರೀತಿಲಿ 
ನಾ ಬಿದ್ದು ಏಳುವೆ

ಈ ಹುಡುಗ ಪಾಪ ಇಷ್ಟು ಗೋಳಾಡಲು 
ಒಂದಿಷ್ಟು ಕರುಣೆ ಬಾರದೇ?
ಈ ಜನುಮವನ್ನು ನಿನಗೆ ಮೀಸಲಿಟ್ಟನು 
ನೀ ಪ್ರೀತಿ ಮಾಡಬಾರದೇ?

ಇಂಥ ಮಂದಹಾಸ 
ಎಂದೂ ಮೂಡೇಯಿಲ್ಲ 
ಬೇರೆ ಇಲ್ಲ ಕಾರಣ 
ನಿನ್ನ ಸನಿಹವನ್ನು 
ನಾನಾಚರಿಸುವಾಗ 
ಎಂಥ ರೋಮಾಂಚನ 
ಕರಗಿ ಹೋದಾಗ 
ಆ ನಿನ್ನ ಬೊಗಸೆ ಕೊಡು 
ಮರುಗಿ ಕೂತಾಗ 
ನೀ ಬಂದು ರಮಿಸಿ ಬಿಡು 
ಹೆಚ್ಚಾಯಿತಿನ್ನೂ ಈ ಹುಚ್ಚು
ಏನಿಂಥ ಅಚ್ಚರಿ…

ಈ ಹುಡುಗ ಪಾಪ ಇಷ್ಟು ಗೋಳಾಡಲು 
ಒಂದಿಷ್ಟು ಕರುಣೆ ಬಾರದೇ?
ಈ ಜನುಮವನ್ನು ನಿನಗೆ ಮೀಸಲಿಟ್ಟನು 
ನೀ ಪ್ರೀತಿ ಮಾಡಬಾರದೇ?

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...