ನೆನಪೆಂಬ ಖಜಾನೆ ತುಂಬ
ಅಡಗಿಸಿಟ್ಟ
ಆ ದಿನಗಳು
ಯಾರ್ಯಾರೋ ಬಂದರೂ ಕೂಡ
ಉಳಿವರಲ್ಲಿ
ಕೆಲವರು
ಈಗಿರೋ ತಲೆ ನೋವೆಲ್ಲಿ ಆಗ
ಎಲ್ಲೆಡೆ ಮಜವಾಗಿತ್ತು ಜಾಗ
ಸುಂದರ ಕ್ಷವನ್ನು ಕೊಂಡಾಡಬೇಕು ನಾವೀಗ
ಈಗಲ್ದೇ ಯಾವಾಗ… ಈಗಲ್ದೇ ಯಾವಾಗ
ಅರೆ ಬೆಂದಿರೋ ಅಕ್ಕಿಯ ಥರ
ಅವಸರದಲೇ ತಯಾರಾದೆವು
ಆಕಾಶವೇ ನಮ್ಮದಾಗಿಸಿ
ನೂರು ಬಣ್ಣವ ಎರಚಿಕೊಂಡೆವು
ಆ ಅಂಕೆಯಿರದ ಖುಷಿಗಳನ್ನು ಲೆಕ್ಕವಿಟ್ಟಾಗ
ಅಲ್ಲಿ ನಮ್ಮ ಪಾಲು ಎಷ್ಟು ಎಂದು ನೋಡುವ ಬೇಗ
ಈಗಲ್ದೇ ಯಾವಾಗ… ಈಗಲ್ದೇ ಯಾವಾಗ
ಒಮ್ಮೊಮ್ಮೆ ಎಲ್ಲಿಯೋ ಸಾಗಿ
ಎಲ್ಲಿಗೋ ಸೇರೋ
ಪಯಣವು
ತಿರುವಲ್ಲಿ ನಮ್ಮನೇ ಕಾದು
ನಿಂತರೋ ಸ್ನೇಹ
ನಿಲ್ದಾಣವು
ಸಾಗುತ ಸವೆದ ದಾರಿಯಲ್ಲಿ
ಸಾವಿರ ಹೆಜ್ಜೆ ಗುರುತಿನಲ್ಲಿ
ನಮ್ಮನು ಹುಡುಕೋಣವೇ ನಾವು ಕಳೆದಿರೋವಾಗ
ಈಗಲ್ದೇ ಯಾವಾಗ.. ಈಗಲ್ದೇ ಯಾವಾಗ..
No comments:
Post a Comment