Friday, 3 April 2026

ಎಲ್ಲೇ ಇರಲಿ ನಿಂದೇನೇ ಗುಣಗಾನ

ಎಲ್ಲೇ ಇರಲಿ 

ನಿಂದೇನೇ ಗುಣಗಾನ
ನಿನ್ನ ಮನಸೇ
ಆ ನನ್ನ ನಿಲ್ದಾಣ
ಓ ಸಖಿ, ನಿನ್ನಲ್ಲೇ ನಾ ಸುಖಿ
ಸಣ್ಣ ಆಸೆ
ಹೊತ್ತಂತೆ ರೆಕ್ಕೆನ
ಹಾರಿ ಬಿಡುವೆ 
ಈ ಪ್ರೀತಿ ಹೀಗೇನಾ
ಓ ಸಖಿ, ನಿನ್ನಲ್ಲೇ ನಾ ಸುಖಿ

ಬರಿದಾದ ಬಾಳಿಗೆ ಬಿರುದಾಗಿಸೋಣ
ಬಳಿಯುತ್ತಲಿ ಹೊಚ್ಚ ಹೊಸತಾದ ಬಣ್ಣ
ಕನಸೆಲ್ಲವ ಇಂದೇ ಒಂದಾಗಿಸೋಣ 
ಈ ಹಬ್ಬವ ಕೂಡಿ ಆಚರಿಸೋಣ
ಹಾಡಿ ಹೊಗಳಿ
ಸಾಕಾಗಿ ಹೋಗಿದೆ
ಆದರೂನೂ
ಈ ಹಾಡೇ ಮುಗಿಯದೇ
ಓ ಸಖಿ, ನಿನ್ನಲ್ಲೇ ನಾ ಸುಖಿ
ಒಂದೇ ಒಂದು 
ಮುದ್ದಾದ ಮಾತಾಡು 
ಮುತ್ತಿಗಾಗಿ 
ನನ್ನೊಡನೆ ಕಾದಾಡು 
 ಸಖಿ, ನಿನ್ನಲ್ಲೇ ನಾ ಸುಖಿ

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...