ತಂಗಾಳಿ ನೀನಾದೆ ಈ ಬಾಳಲಿ
ತಂಪಾಗಿದೆ ನೋಡು ಈ ಜೀವ
ನಾನೇನನ್ನು ಕೊಡಬೇಕು ಬದಲಾಗಿ
ತಗೋ ನನ್ನ ಹೃದಯನೇ ನಿನದೀಗ
ಏನೋ ಖುಷಿ ನೀನು ಬಳಿ ಬಂದರೆ
ಮಿಂಚೊಂದು ಸಂಚಾರ ಎದೆಯಲ್ಲಿ
ಅದೇಕೋ ಅದೇ ನಾಚಿಕೆ ನನ್ನಲಿ
ಎಲ್ಲಕ್ಕೂ ಮಿಗಿಲಾದೆ ಯಾವಾಗಾ?
ಈ ರಾಗದ ಹಾದಿ ಹಿಡಿದಾಗಲೇ
ಅನುರಾಗದ ಹಾಡು ಶುರುವಾಯಿತು
ಆರೋಹಣ ಎಲ್ಲೇ ಮೊದಲಾದರೂ
ಆ ಮಾತ್ರಕೆ ಕಣ್ಣು ನೀರಾಯಿತು
ಈಗಿಂದಲೀಗ ನಾ ಹೊರಟಾಗಿದೆ
ನೀ ಹಿಂದೆ ಬರುವಂತೆ ಒತ್ತಾಯಿಸಿ
ಅದೇನಾಗಲಿ ಸೂಚನೆ ನೀಡೆನು
ಹಿಂಬಾಲಿಸು ನೀನೇ ಊಹಿಸಿ....
No comments:
Post a Comment