Friday, 3 April 2026

ಏನಾದರೂ ನುಡಿ

ಏನಾದರೂ ನುಡಿ

ಬರಿದೆ ಮೌನ ಸಾಕಾಗಿದೆ
ಹೆಗಾದರೂ ನಗು
ನನಗೂ ಚೂರು ಬೇಕಾಗಿದೆ
ನೀ ನನಗೆ, ನಾ ನಿನಗೆ ಈ ಲೋಕದಿ
ಬೇರಾರೂ ಕಾಣೊಲ್ಲವೇಕೆ?
ನಿನ್ನೊಳಗೆ ನನ್ನನ್ನು ಸೆರೆ ಮಾಡಿಕೋ
ನಮ್ಮನ್ನು ಸಮವಾಗಿಸೋಕೆ
ಯಾರ್ಯಾರದೋ ಕತೆಯೇತಕೆ
ಈ ಪ್ರೀತಿಗೆ ನಾವೇ ಸಾಕ್ಷಿ...

ಇರಬೇಕಾಗಿದೆ ನೀ ಜೊತೆಗೆ
ಎಡವೋ ಗಳಿಗೆ ತಡವಲು ಬೆರಳ
ಕೊಡಬೇಕೇನನೋ ನಾ ನಿನಗೆ
ಏನೇ ಕೊಡಲಿ ಅನಿಸಿತು ಸರಳ
ಹಗುರಾಗುವೆನು
ನಿನ್ನುಸಿರನು ಸೇವಿಸಿ, ಸೇವಿಸಿ
ಎದುರಾಗುವೆನು
ಮುತ್ತುಗಳನು ಪೋಣಿಸಿ, ಪೋಣಿಸಿ
ಪದವಿರದೆ ಬರೆಯುವೆನು
ನಮ್ಮ ಪ್ರೇಮ ಕಾದಂಬರಿ
ಆದಿ ಅಂತ್ಯದ ಎಲ್ಲೇ ಮೀರುತ..

ಇರಲೇ ಬಾರದು ನಮ್ಮ ನಡುವೆ 
ಸುಡುವ ವಿರಹ ಎಂಬುವ ಪರದೆ
ಕೊಡಲೇ ಬಾರು ಹೃದಯವನು
ಜೊತೆಗೆ ಇರವ ಮಾತನು ಕೊಡದೆ
ಅತಿ ಸುಲಭದಲಿ
ಅರಿತೆವು ನಮ್ಮಯ ಅಂತರಾಳ
ಹಸಿಗನಸಿನಲಿ
ಕಲಿಸುವೆ ಎಲ್ಲ ಹಿಡಿ ತೋರು ಬೆರಳ
ಪ್ರಿಯ ಸಖನೇ ಕರೆದೊಡನೆ
ಹಿಂದೆ ಮುಂದೆ ನಾ ನೋಡದೆ
ಬಂದೇ ತೀರುವೆ ನಿನ್ನ ಗೂಡಿಗೆ..

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...