Friday, 3 April 2026

ಹೋಗುವ ಬಾ ನನ್ನ ಇನಿಯ

ಹೋಗುವ ಬಾ ನನ್ನ ಇನಿಯ

ಬಾನಿನಂಚಿನ ಊರಿಗೆ
ನನ್ನ ನಿನ್ನ ಪ್ರೇಮ ವಿಷಯ
ಹೇಳಿ ಬರುವ ತಾರೆಗೆ

ನನ್ನ ಕುಂಚದ ಅಂಚಲಿ
ನಿನ್ನ ಹೆಸರಿನ ಇಂಚರ
ಸಂಕುಚಿತವೇನಲ್ಲದ
ಮೋಹ ತೀರದ ಸಾಗರ
ಹೇಳದ ನೂರಾರು ಮಾತು
ಆಯಿತೇಕೋ ಹೂ ನಗೆ
ಹೋಗುವ ಬಾ ನನ್ನ ಇನಿಯ
ಬಾನಿನಂಚಿನ ಊರಿಗೆ

ಸಣ್ಣದೀ ಹನಿಗವನವು
ಬೇಗ ಮುಗಿಸುವೆ ಆಲಿಸು
ಎಲ್ಲ ಸಾಲಿವು ನನ್ನವೇ
ನಿನ್ನ ಸಾಲನು ಸೇರಿಸು
ನೇರ ಹೇಳಲು ಆಸೆಗಳನು
ಏಕೋ ನಾಚಿಕೆ ಈ ಬಗೆ
ಹೋಗುವ ಬಾ ನನ್ನ ಇನಿಯ
ಬಾನಿನಂಚಿನ ಊರಿಗೆ

ಅಂತರ ಇನ್ನೇತಕೆ
ಉಸಿರು ಉಸಿರಿಗೆ ತಾಕಲಿ
ಸನಿಹದಲ್ಲಿಯೇ ಸಿರಿತನ
ಎಲ್ಲ ಎಲ್ಲೆಯೆ ಮೀರಲಿ
ಬಾಚಿಕೋ ಮನಸಾರೆ ನನ್ನ
ತಬ್ಬಿ ನಲಿಯಲಿ ಗುಂಡಿಗೆ
ಹೋಗುವ ಬಾ ನನ್ನ ಇನಿಯ
ಬಾನಿನಂಚಿನ ಊರಿಗೆ

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...