ನನ್ನ ನಿನ್ನ ಸ್ನೇಹ
ಎಷ್ಟು ಸುಂದರ
ಇನ್ನೂ ಹೇಳಬೇಕು
ಬರಲೇ ಹತ್ತಿರ
ಕಾರಣ ಇಲ್ಲದೆ
ಪ್ರೀತಿ ಆಗದು
ಪ್ರೀತಿ ಆಗಲು
ಗೊತ್ತೇ ಆಗದು
ದೂರ ಆದರೂ
ಬಿಟ್ಟು ಹೋಗದು
ಪ್ರೀತಿ ಇಲ್ಲದ
ಲೋಕ ಯಾವುದು..
ಇಬ್ಬರಲೂ ಒಬ್ಬರಿಗೊಬ್ಬರ
ಮೇಲೆ ಇರೋ ಮೋಹ ನಿರಂತರ
ಸುತ್ತುವರಿ ಗದ್ದಲವಿದ್ದರೂ
ಸರಾಗ ಸುಯೋಗವೇ ನಿನ್ನ ಇಂಚರ
ಗೆದ್ದಿರುವೆ ನನ್ನಯ ಮನಸನು
ಮುದ್ದಿಸಲು ಅನುಮತಿಯೇತಕೆ
ಮದ್ದಿರದ ಖಾಯಿಲೆ ಪ್ರೀತಿಯು
ಆಗಾಗ ಒತ್ತಾಯ ಮುತ್ತೆಂಬ ಲೆಹಕೆ
No comments:
Post a Comment