Friday, 3 April 2026

ಬಿಡುಗಡೆ ಬೇಡಿರುವ

ಬಿಡುಗಡೆ ಬೇಡಿರುವ

ತರಗೆಲೆ ನಾ
ನಿನಗೆಂದೇ ಚಿಗುರುವೆನು 
ಮರಳಿ ದಿನ
ಎಳೆ ಬಿಸಿಲ ಬಯಸಿರಲು 
ಮಳೆ ಹನಿಯ ಜೊತೆ ಬರುವೆ..

ಅರಳೋ ಗಳಿಗೆ
ಕರೆದು ಬಳಿಗೆ
ನಗುವ ನನ್ನನ್ನು ಇನ್ನೂ ಚಂದಗೊಳಿಸು
ಬಾರೋ ಬೇಗ, ಬಾರೋ ಬೇಗ, ಬಾರೋ ಬೇಗ

ನಿಂದೇ ಗುಣಗಾನವಿನ್ನು
ನೀನೇ ನೆನಪು ಕೂಡಿಟ್ಟ ಜೇನು
ನಿನಗಾಗೇ ಬಾಳುವೆ ನಾನಿನ್ನೂ
ಒಲವ ಸೆಲೆಯ ಕಡಲಲ್ಲಿ 
ಸಾಗುತ್ತಿರೋ ಹಡಗಂತೆ ನಾವು
ಸಾಲು, ಸಾಲು ಅಲೆಯ ಜೊತೆಗೆ
ಗುರಿಯಿಲ್ಲದಂಥ ರೋಚಕ ಪಯಣವಿದು
ಓ.. ಗುರಿಯಿಲ್ಲದಂಥ ರೋಚಕ ಪಯಣವಿದು

ಈ ಕೆಂದಾವರೆಯೊಂದು
ಒಂಟಿ ಕೊಳದೊಳಗೆ
ದೂರದಲ್ಲಿರೋ ನಿನ್ನ
ಧ್ಯಾನ ಮನದೊಳಗೆ
ಅವಸರದಲ್ಲಿ ಅರೆಗಳಿಗೆ
ಬಂದು ಹೋಗು.. ನಲ್ಲ..
ನೀಗದ ಒಂದು ನೀಳ ದಾಹ
ನೀಗಲೆಂತೋ ತಿಳಿಯದಾಗಿದೆ
ಜಾರೋ ಹನಿಯ
ತಡೆದು ಹಿಡಿದಿಡು
ನೀ ಅಳದಿರು ನಾ ಬರುವೆ...

ಅರಳೋ ಗಳಿಗೆ
ಕರೆದು ಬಳಿಗೆ
ನಗುವ ನನ್ನನ್ನು ಇನ್ನೂ ಚಂದಗೊಳಿಸು
ಬಾರೋ ಬೇಗ, ಬಾರೋ ಬೇಗ, ಬಾರೋ ಬೇಗ

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...