Friday, 3 April 2026

ಮುತ್ತು ಮುತ್ತು ಸೇರಿಕೊಂಡ ದಾರವೇ

ಮುತ್ತು ಮುತ್ತು ಸೇರಿಕೊಂಡ ದಾರವೇ

ಕುಂದಣದಿ ಮಿಂದು ಮಿಂಚೋ ಹಾರವೇ
ರೇಷಿಮೆಯ ನಾಚಿಸುವ ಬಣ್ಣವೇ
ಕಣ್ಣಿಗೊತ್ತಿಕೊಳ್ಳುವಂಥ ಅಂದವೇ
ದೇವ ದೇವತೆಗಳೆಲ್ಲರೂ
ಧರೆಗಿಳಿದು ಬಾಳಿಗೊಪ್ಪಿಸಿರುವಂಥ ದೇವತೆಯೇ
(ಕರೆ ತಂದು ನನ್ನ ಬಾಳಿಗೊಪ್ಪಿಸಿದ ದೇವತೆಯೇ)
ವೇದ ವಾಕ್ಯವೇನೆಂದರೂ
ಸರಿ ದಾರಿ ತೋರಿಸು ನಾ ಮುನ್ನಡೆವೆ ನಿನ್ನಂತೆಯೇ

ಬಂದಳಮ್ಮ, ಬಂದಳಮ್ಮ ಪ್ರೀತಿ ತಂದಾಳಮ್ಮ
ಕೈ ತುತ್ತು ಹಾಕಿ ಪ್ರೀತಿ ಹಂಚುತ್ತಾಳಮ್ಮ
ಬಂದಳಮ್ಮ, ಬಂದಳಮ್ಮ ಮುದ್ದು ಮಾತಿನ ಗುಮ್ಮ
ಕಣ್ಣಾಯಿಸುವಲ್ಲೆಲ್ಲೆಲ್ಲೂ ನೀನೇನಮ್ಮ

ಸರಿ ಉತ್ತರವಿಲ್ಲ
ಪ್ರಶ್ನೆಗಳಾವುದಕೂ
ತಪ್ಪನ್ನು ಬೇಕಂತ ಮಾಡೋದಾ?
ತುದಿಗಣ್ಣಲಿ ಕೂತು
ಕಾಡಿಗೆಯ ಮರೆಗೆ
ನನ್ನಾಸೆ ಎಲ್ಲಾನೂ ಹೇಳೋದಾ?
ಸಣ್ಣ ಪುಟ್ಟ ಕೋಪ ರಂಗು ಹೆಚ್ಚಿಸೋಕೆ
ಸೆರಗಲ್ಲೇನೇ ಇರುವೆ ಮಾಡು ಚೂರು ಜೋಕೆ
ಮಾತಿನಲ್ಲೇ ಪದ್ಯ-ಪ್ರಾಸ ಹೇಳುವಾಕೆ
ನೀನೇ ಸಾಕು ಇನ್ನು ಬೇರೆ ಕಾವ್ಯ ಬೇಕೆ
ಏಕಾಂತಕ್ಕೆ ನೀನಿರುವಾಗ
ಅದೇಕಿಂತ ಬಿಗುಮಾನವೀಗ..

ಬಂದಳಮ್ಮ, ಬಂದಳಮ್ಮ ಪ್ರೀತಿ ತಂದಾಳಮ್ಮ
ಆ ಮಡಿಲೇ ನನ್ನ ತೂಗುಯ್ಯಾಲೆ ಕೇಳಮ್ಮ
ಬಂದಳಮ್ಮ, ಬಂದಳಮ್ಮ ಮುದ್ದು ಮಾತಿನ ಗುಮ್ಮ
ನಗುವಲ್ಲೇ ಜೋಗುಳ ಹಾಡೋ ಕಲೆಯು ನಿಂದಮ್ಮ

ಅತಿ ಎತ್ತರ ಶಿಖರ
ನಾವೇರಲು ಜೊತೆಗೆ
ದಣಿವನ್ನೇ ಕಂಡಿಲ್ಲ ಅದು ಹೇಗೆ?
ಪ್ರೇಮಾಮೃತವನ್ನು
ನೀ ಉಣಿಸಿದ ಗಳಿಗೆ
ನನಗೀಗ ಅರಿವಾಯ್ತು ತಡವಾಗಿ
ತಂಟೆ ಮಾಡೋ ತುಂಟನಾಗಬೇಕೇ ಹೇಳು?
ಗಂಟೆಗೊಮ್ಮೆ ನಿನ್ನ ಮುದ್ದು ಮಾಡೋ ಗೀಳು
ಬೇರು ಬಿಟ್ಟ ಹಾಗೆ ಬಾಳಿನಲ್ಲಿ ನಿಲ್ಲು
ಗಟ್ಟಿಯಾಗಿ ಕೈಯ್ಯ ಹಿಡಿವೆ ಕನಸಿನಲ್ಲೂ
ನಿರಾತಂಕ ನೀನಿರುವಾಗ
ಇರೋದೊಂದೇ ಹೃದಯಾನೂ ನಿಂದೇ..

ಬಂದಳಮ್ಮ, ಬಂದಳಮ್ಮ ಪ್ರೀತಿ ತಂದಾಳಮ್ಮ
ನನ್ನ ಪೂರ್ತಿ ಈಗ ನೀ ಆವರಿಸಮ್ಮ
ಬಂದಳಮ್ಮ, ಬಂದಳಮ್ಮ ಮುದ್ದು ಮಾತಿನ ಗುಮ್ಮ
ಜನ್ಮ ಜನ್ಮಕೂ ನಿನ್ನ ಬಿರುದೇ ಬೇಕಮ್ಮ..

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...