ಆಲಿಸು, ಕೋಮಲೇ ಆಲಿಸು
ಆಲಿಸು, ಕೋಮಲೇ ಆಲಿಸು
ನಿನ್ನ ಅಂಗೈಯ್ಯ ಮೇಲೆ
ನನ್ನ ಈ ಜೀವನ
ಪ್ರಾಣಕೂ ಹೆಚ್ಚು ಪ್ರೀತಿಸಿ
ಹೊತ್ತು ಕೊಂಡಾಡುವೆ ದಿನ
ನಿತ್ಯ ಮಂದಾರ ಹೂವಂತೆ
ಅರಳುವ ನೀನೇ ಚಂದ
ನಿನ್ನ ಹೋಲೋ ಚೆಲುವೆ
ಕಂಡೇ ಇಲ್ಲ
ಇದ್ದರೆ ಸಾಕು ನಿನ್ನಲ್ಲಿ
ಬೇಡೆನು ಬೇರೆ ಏನೂ
ಸುಂದರ ಆವರಣ
ನೀನಿರೆ ಎಲ್ಲ
ಹತ್ತಿರ ಕೂರು ಇನ್ನೂ
ಬೇಕು ಒಂದು ಕ್ಷಣ
ಏನೋ ಹೇಳೋಕೆ ಹೋಗಿ
ಮೌನವ ತಾಳಿದೆ ಮನ..
ಪ್ರೇಮದ ರೂಪವ ಎಲ್ಲೂ
ಬಣ್ಣಿಸೋ ರೇಖೆಯಿಲ್ಲ
ನಿನ್ನ ಚಿತ್ತಾರವನೇ
ಬಿಡಿಸೋದೇನು?
ಸಾಗುವ ಕಾಲವು ನಮ್ಮ
ಕೈಯ್ಯಲಿ ನಿಲ್ಲದಲ್ಲ
ಕೂಡಿಟ್ಟುಕೊಳ್ಳೋಣ
ನೆನಪ ಜೇನು
ನಮ್ಮ ಸಾಂಗತ್ಯ ನೋಡಿ
ಚಂದಿರ ಮೂಕನಾ
ಬಾನಿಗೆ ಹಬ್ಬದಂತೆ
ಮಿಂಚಲು ತಾರಾಗಣ..
No comments:
Post a Comment