Friday, 3 April 2026

ಮಲಗೇ ಮಗುವಾಗಿ

ಮಲಗೇ ಮಗುವಾಗಿ 

ನಿನ್ನ ಕಣ್ಣಿನಲ್ಲೇ
ಇರುವೆ ಕನಸಾಗಿ 
ಒಂದು ಒಳ್ಳೆ ಮಾತು ಹೇಳಲೇ
ನನ್ನ ಜೀವ ಈಗ ನಿನ್ನಲೇ
ಆರಿರಾರೋ.. ರಾರಾರಿರೋ...

ಕೊಟ್ಟು ಪಡೆವ ಆಸೆಗಳನ್ನು
ಬಿಟ್ಟು ಕೊಡುವ ಮುನಿಸುಗಳನ್ನು
ಏಳೂ ಜನುಮ ಜೊತೆಯಲಿ ಕಳೆವ ಎಂದು
ಆಣೆ ಮಾಡಿ ಹೇಳುವೆ
ಕೊನೆಯ ವರೆಗೂ ಕಾಯುವೆ 

ಚಿನ್ನ ಬೆಳ್ಳಿ ಸಿರಿಯು ನೀನೇ 
ನಗೆಯ ಬೀರೋ ಸಿಹಿಯ ಜೇನೇ 
ಏನೇ ಬರಲಿ ಹಿಡಿತಕೆ ಬೆರಳು ಸಿಗಲಿ 
ತುಂಬ ಕರುಣಿ ದೇವರು
ಒಂದಾದೆವು ನಾವಿಬ್ಬರೂ

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...