Friday, 3 April 2026

ಏನೋ ಹೋಳಲು ಕಾದಿವೆ ಕಂಗಳು

ಏನೋ ಹೋಳಲು ಕಾದಿವೆ ಕಂಗಳು

ಏನದು ಹೇಳೆಯಾ, ಹೇಳೆಯಾ, ಹೇಳೆಯಾ?
ನೀನೇನಂದರೂ ಒಪ್ಪುವೆ ಆದರೂ
ಏನದು ಹೇಳೆಯಾ, ಹೇಳೆಯಾ, ಹೇಳೆಯಾ?

ನೀನು ಗುಟ್ಟಾಗಿ ಬಚ್ಚಿಟ್ಟ ಆಸೆಗಳು
ಹೂವ ಮೇಲೆ ಇಬ್ಬನಿಯಂತೆ ತೂಗುತ್ತಿವೆ
ತೊಟ್ಟು ಜೇನನ್ನು ಕೂಡಿಟ್ಟು ದುಂಬಿಗಳು
ನಿನ್ನ ಎದುರಲ್ಲಿ ಬಿನ್ನಾಣ ತೋರುತ್ತಿವೆ
ಎಲ್ಲಕೂ ಪೀಠಿಕೆ ಏತಕೆ ಹಾಕುವೆ?
ಏನದು ಹೇಳೆಯಾ, ಹೇಳೆಯಾ, ಹೇಳೆಯಾ?
ಏನೋ ಹೋಳಲು ಕಾದಿವೆ ಕಂಗಳು
ಏನದು ಹೇಳೆಯಾ, ಹೇಳೆಯಾ, ಹೇಳೆಯಾ?

ಸುಂದರ ಸಂಜೆಯು ಜಾರುವ ಮುನ್ನವೇ
ಕೇಳಬೇಕು ನಾನೊಂದು ಕಾಡೋ ಪ್ರಶ್ನೆಯ
ಚಂದಿರ ಏಕೆ ಈಗೀಗ ಮಂಕಾದನು
ನಿನ್ನ ಕಾಂತಿಯ ಕಂಡು ಅನ್ನೋ ಸಂಶಯ
ಏನನೂ ಹೇಳದೆ ಎಲ್ಲವ ಬಲ್ಲೆಯಾ?
ಏನದು ಹೇಳೆಯಾ, ಹೇಳೆಯಾ, ಹೇಳೆಯಾ?
ಏನೋ ಹೋಳಲು ಕಾದಿವೆ ಕಂಗಳು
ಏನದು ಹೇಳೆಯಾ, ಹೇಳೆಯಾ, ಹೇಳೆಯಾ?
ನೀನೇನಂದರೂ ಒಪ್ಪುವೆ ಎಲ್ಲವ 
ಏನದು ಹೇಳೆಯಾ, ಹೇಳೆಯಾ, ಹೇಳೆಯಾ?

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...