ಯಾರಿವಳು ನನ್ನ ಮನದಿ
ಭೋರ್ಗರೆದು ಹರಿವ ಶರಧಿ
ಯಾಕಿನ್ನೂ ಬರದೇ ಇಹಳೋ
ಎಲ್ಲಿಹುದೋ ಅವಳ ಸರದಿ
ದಡದ ಮರಳ ಮಡಿಲ ಬರಹ
ಅವಳಾಗೇ ಓದುವಳೇ..
ಕಾರಿರುಳು ಕವಿಯೋ ಮೊದಲೇ
ಕಾಯಿಸದೆ ಎದುರು ಸಿಗದೆ
ಏಕಿರುವೆ ತೆರೆಯ ಮರೆಗೆ?
ಆಟದಲೇ ಖುಷಿಯೇ ನಿನಗೆ?
ಮಳೆಗಾಲ ಮುಂದೂಡಿ
ನೀಲಿನೇ ಆಕಾಶ
ಋತುಮಾನ ಜೊತೆಯಲ್ಲಿ
ನನದೊಂದು ಸಂಘರ್ಶ
ಯಾರೇ ನೀನು.. ಯಾರೇ ನೀನು..
ಯಾರೇ ನೀನು.. ಯಾರೇ ನೀನು..ಯಾರೇ ನೀನು..
ನೀ ಅಡಗಿ ಉಳಿದ ಜಾಗ
ನನ್ನ ಉಸಿರು ಬಯಸೋ ಭಾಗ
ಅರಿವಾಗಿಹುದು ನನಗೂ ಕೊನೆಗೆ
ಅಭಿಸಾರಿಕೆಯಾ ಅಭಿಮಾನಿಯು ನಾ
ಹಗಲು ಇರುಳು ನಿನದೇ ಬಯಕೆ
ಉಪಚಾರ ಸ್ವೀಕರಿಸು...
ನನ್ನ ನಾಳೆಗಳ
ತುಂಬೆಲ್ಲ ನಿಂದೇ ಸಿಂಗಾರ
ನೀನು ಜೊತೆಗಿರಲು
ನನಗದುವೇ ಪ್ರೇಮ ಕಾಶ್ಮೀರ..
ಕರಗಿ ಬಿಡಲೇ ಕಣ್ಣಿನೊಳಗೆ
ಉರುಳಿ ಬರಲು ಕೆನ್ನೆಗೆ
ಗುನುಗೋ ವೇಳೆ ನಿನ್ನ ಹಾಡು
ಒರಗು ಎದೆಗೆ ಮೆಲ್ಲಗೆ
ಯಾರೇ ನೀನು.. ಯಾರೇ ನೀನು..
ಯಾರೇ ನೀನು.. ಯಾರೇ ನೀನು..ಯಾರೇ ನೀನು..
ನೀ ಅಡಗಿ ಉಳಿದ ಜಾಗ
ನನ್ನ ಉಸಿರು ಬಯಸೋ ಭಾಗ
ಅರಿವಾಗಿಹುದು ನನಗೂ ಕೊನೆಗೆ
ಅಭಿಸಾರಿಕೆಯಾ ಅಭಿಮಾನಿಯು ನಾ
ಹಗಲು ಇರುಳು ನಿನದೇ ಬಯಕೆ
ಉಪಚಾರ ಸ್ವೀಕರಿಸು...
No comments:
Post a Comment