Friday, 3 April 2026

ಹೃದಯವೇ ನೆಮ್ಮದಿಗಾಗಿ

ಹೃದಯವೇ ನೆಮ್ಮದಿಗಾಗಿ 

ಹುಡುಕಾಡುವೆ ಎಲ್ಲೆಲ್ಲೋ ಸಾಗಿ 
ಬಯಸಿದ ಹಾಗೆ ಬದುಕು ನಡೆಸೋಕೆ 
ನಾ ಹೊರಟು ನಿಂತಂತೆ 
ದಾರ ಹರಿದು ಬಿಟ್ಟ ಮುಗಿಲೆಂಬ 
ಗಾಳಿ ಪಟದಂತೆ 
ಎಲ್ಲ ಮೋಹ ಮೀರಿದಾಗ 
ಭೂಮಿಗೆರಗಲೇ ಬೇಕು 
ಮತ್ತೆ ಹಾರುವ ಹಂಬಲಕೆ 
ಮನವು ಹಾತೊರೆಯಲೇಬೇಕು
ಹಂಬಲ ನೆಮ್ಮದಿಗಾಗಿ 
ಅಲೆದಾಡುವೆ ಆ ಸಲುವಾಗಿ.. ಹಂಬಲ..

ಅಲೆಗಳು ಸಾಲುಗಟ್ಟಿವೆ 
ಆ ಒಂದೇ ದಡ ಮುಟ್ಟಲು 
ರೆಕ್ಕೆಯು ಬಲಿತರೆ ಸಾಲದೆ 
ಆಗಸಕೇಕೆ ಮೆಟ್ಟಿಲು 
ತಡವಾಗಿಯೇ ಆದರೂ 
ಆ ಗುರಿಯ ತಲುಪೋಕಿದೆ 
ಅವಮಾನಿಸೋ ದಾರಿಗೆ 
ಮೈಲಿಗಲ್ಲು ನೆಡಬೇಕಿದೆ 
ಆರಂಭ… ಆರಂಭ 
ಆರಂಭ ಪ್ರತಿ ಹೆಜ್ಜೆಯಿದು 
ಆ ದೂರ ಪಯಣಕ್ಕೆ 
ಅರಿಯದೆ ತಪ್ಪಿದ ತಿರುವುಗಳಿವು 
ಪಾಠ ಇಟ್ಟ ಪಾದಕ್ಕೆ 
ಕಲ್ಲು ಮುಳ್ಳುಗಳ ದಾಟಿ 
ಎಲ್ಲೋ ತಾಣವಿರಬೇಕು 
ಅಲ್ಲಿ ಬೀಳೋ ಕನಸಲ್ಲೂ 
ಬೀಳದ ಹಾಗೆ ಸ್ಥಿರತೆಯಿರಬೇಕು..

ನೆಮ್ಮದಿ ಬದುಕೋದಕಾಗಿ
ಬದುಕೋದೆ ನೆಮ್ಮದಿಗಾಗಿ...

ಖುಷಿ...  ಖುಷಿ  ..  ಖುಷಿ  ..

ನೆಮ್ಮದಿ ಖುಷಿಯಲಿ
ಖುಷಿಯಲೇ ನೆಮ್ಮದಿ...

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...