ನೀಲಿ ನೀಲಿ ಅಂಬರದಿ
ಚಂದ್ರಮುಖಿ ಕಂಡೆ
ಮೋಹಕೊಳಗಾದೆ
ಪ್ರೀತಿಯಲಿ ಮಿಂದೆ
ಪದವಿ ಬೇಕಾಗಿಲ್ಲ
ಅನುಭವ ಏನಿಲ್ಲ
ಸೋಲುತ ನಾ ಪ್ರೇಮಿಯಾದೆ
ಸಾಲು ಸಾಲು ದಾಳಿ
ತಡೆಯುತ್ತ ಬಂದೆ ನೋಡು
ಒಂದೇ ಬಾಣ ನಿಂದು
ಹೀಗಾಯ್ತು ನನ್ನ ಪಾಡು
ಮುಚ್ಚುಮರೆಯೇನಿಲ್ಲ
ಸ್ವಚ್ಛ ಮನದ ನಲ್ಲ
ನಿನ್ನ ಹೊರೆ ಹೊರುತಾನೆ
ಪ್ರೀತಿ ಮಳೆಗರೆತಾನೆ
ಪದವಿ ಬೇಕಾಗಿಲ್ಲ
ಅನುಭವ ಏನಿಲ್ಲ
ಸೋಲುತ ನಾ ಪ್ರೇಮಿಯಾದೆ
ನೀಲಿ ನೀಲಿ ಅಂಬರದಿ
ಚಂದ್ರಮುಖಿ ಕಂಡೆ
ಮೋಹಕೊಳಗಾದೆ
ಪ್ರೀತಿಯಲಿ ಮಿಂದೆ
ತಪ್ಪೋ ವೊಪ್ಪೋ ನಾನು
ಇರಿಸಾಯ್ತು ಹೆಜ್ಜೆ ಮುಂದೆ
ಕುಣಿಯೋ ಕೆಲಸ ನಂದು
ನೀನೇಕೆ ಗೆಜ್ಜೆ ತಂದೆ?
ಗಂಧ ತೀಡಿ ಬಂತು
ಜೇನಿನಂಥ ಮಾತು
ಕೇಳುಗ ನಾನಾದೆ
ಗೀಚುತ ಕವಿಯಾದೆ
ಪದವಿ ಬೇಕಾಗಿಲ್ಲ
ಅನುಭವ ಏನಿಲ್ಲ
ಸೋಲುತ ನಾ ಪ್ರೇಮಿಯಾದೆ..
No comments:
Post a Comment