Friday, 3 April 2026

ನನ್ನ ಮನಸಲ್ಲಿ

ನನ್ನ ಮನಸಲ್ಲಿ

ನಿನಗಾಗಿ ಸುವಿಚಾರ
ಎಲ್ಲ ಹೇಳುವೆನು
ನಿಲ್ಲದಿರು ತುಸೂ ದೂರ

ಅರಳಿದ ಹೂವಲ್ಲಿ
ಘಮ್ಮನೆ ನಿನ್ನ ಗುರುತು
ಬರೆಯುವ ಸಾಲೆಲ್ಲ
ಕೇವಲ ನಿನ್ನ ಕುರಿತು 
ಹಾಡು ಮೂಡುವುದು
ಈ ಪ್ರೀತಿ ಅನುಸಾರ

ನೆನೆಯುವೆ ನಿನ್ನನ್ನೇ
ಜಾಗವನ್ನೇ ಮರೆತು
ಅನಿಸುವುದು ನನಗೆ
ಏನಿದೆ ನಿನ್ನ ಹೊರತು
ತಾರೆ ಜೊತೆಗೂಡಿ
ಬಿಡಿಸೋಣ ಚಿತ್ತಾರ

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...