Friday, 3 April 2026

ಕತೆ ಹೇಳಬೇಕೊಂದ ನಿನಗೆ

ಕತೆ ಹೇಳಬೇಕೊಂದ ನಿನಗೆ 

ಜೊತೆಯಾಗು ಬಾ ಕೊನೆಯ ವರೆಗೆ 
ಹೇ ತಂಪು ಗಾಳಿ, ನೀ ಗಂಧ ಚೆಲ್ಲಿ
ಸುಳಿದಾಡಿಕೊಂಡೇ ಇರುವೆಯೇನು 

ಕತೆ ಹೇಳಬೇಕೊಂದ ನಿನಗೆ 
ನಮ್ಮ ಹೊರತು ಯಾರಿಲ್ಲ ಒಳಗೆ
ಹೇ ತಂಪು ಗಾಳಿ, ನೀ ಗಂಧ ಚೆಲ್ಲಿ
ಸುಳಿದಾಡಿಕೊಂಡೇ ಇರುವೆಯೇನು 


ನೂರಾರಿವೆ ನನ್ನಾಸೆಯು 
ನಾನೆಲ್ಲವ ಹೇಳಬೇಕು 
ನಿನ್ನಿಷ್ಟಕೆ ನೀ ಹೊರಟರೆ
ಏನೆಂದು ನಾ ತಿಳಿಯಬೇಕು 
ಹೃದಯದೊಳಗೊಂದು 
ಪದವ ಹೆಣೆವಾಗ
ಬಳಪ ಮುರಿದಂತೆ ಆಯಿತೇನೋ 

ಕತೆ ಹೇಳಬೇಕೊಂದ ನಿನಗೆ 
ಮಿತಿ ಮೀರುತ ಹೇಳೋ ಗಳಿಗೆ
ಹೇ ತಂಪು ಗಾಳಿ, ನೀ ಗಂಧ ಚೆಲ್ಲಿ
ಸುಳಿದಾಡಿಕೊಂಡೇ ಇರುವೆಯೇನು

ಕಣ್ಣಂಚಿಗೆ ಬಂದಂತಿದೆ 
ತಾರಾಗಣ ತಂದ ಮಿಂಚು 
ಬೆರಳೊಂದಿಗೆ ಬೆರಳ ಹಿಡಿ 
ಹೂಡುತ್ತಲಿ ಸಣ್ಣ ಸಂಚು 
ಕೊನೆಯೇ ಇರದಂಥ 
ಮೊದಲ ಸಾಲನ್ನು 
ತಿರುಗಿ ಮೊದಲಿಂದ ಹಾಡಲೇನು..

ಕತೆ ಹೇಳಬೇಕೊಂದ ನಿನಗೆ 
ಅತಿಯಾದ ಒಲವಲ್ಲೀ ಸಲುಗೆ 
ಹೇ ತಂಪು ಗಾಳಿ, ನೀ ಗಂಧ ಚೆಲ್ಲಿ
ಸುಳಿದಾಡಿಕೊಂಡೇ ಇರುವೆಯೇನು

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...