Friday, 3 April 2026

ಹೃದಯಕ್ಕೆ ಸಾವಿಲ್ಲ

ಹೃದಯಕ್ಕೆ ಸಾವಿಲ್ಲ

ಎದೆ ಬಡಿತ ನಿಂತರೂ
ಯುಗ ಯುಗದ ಆಚೆಗೂ
ನೆನಪುಳಿವ ಪ್ರೀತಿಲಿ
ಬಿಡಿಸೋಕೆ ಆಗೊಲ್ಲ
ಪದಗಳಿಗೆ ಸಿಕ್ಕರೂ
ಪುಟಗಳಲಿ ದಾಖಲು
ಆಗಿಸುವ ಹೊತ್ತಲಿ
ಹಾಡುಗಳು ಮೂಡುವುದು
ಮನಸಿಂದ ಮನಸಿಗೆ
ಕೇಳಿಸದು ಅದು ಯಾರ ಕಿವಿಗೂ
ಭಾವ ತುಂಬಿದ ಕವಿತೆ
ಕೊರೆವ ಹೊತ್ತಲ್ಲಿ
ಒಗಟಂತೆ ತೋಚುವುದು ಕವಿಗೂ

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...