ಇರಲಾರೆ ನಾನು
ಇರುವಂತೆ ಇನ್ನೂ
ನೀನಿರದೆ ನನ್ನ ಜೊತೆಗೆ
ಕರೆವಾಗ ನಿನ್ನ
ಬರಲಾರೆಯೇನು
ನೀ ಹಾಗೇ ಒಂದು ಗಳಿಗೆ
ಇರುಳಲ್ಲಿ ಕಂಡೆ
ಕಿರು ದೀಪದಂತೆ
ಈ ದಾರಿ ಮುಗಿವವರೆಗೆ
ಹಗಲೆಲ್ಲ ನಿನ್ನ
ಕನವರಿಕೆಯಲ್ಲಿ
ಏನನ್ನಬೇಕೀ ಸ್ಥಿತಿಗೆ
ಹೋರಾಟ, ಹೋರಾಟ
ಬದುಕೆಲ್ಲ ಚೀರಾಟ
ಆಸೆ, ಹಂಬಲ
ತಂದಿಟ್ಟ ಒದ್ದಾಟ
ಪ್ರೀತಿ ಜೊತೆಗಿದ್ದೂ
ಏನಿಂಥ ಹುಡುಕಾಟ...
No comments:
Post a Comment