Friday, 3 April 2026

ಕಾದಿರುವೆನು ಮೂಡುವ ನಾಳೆಗೆ

ಕಾದಿರುವೆನು ಮೂಡುವ ನಾಳೆಗೆ

ಈ ದಿನವನು ಕೂಡಿಸೋ ಆಸೆಗೆ
ಮಾತೇ ಮುಗಿಯದ, ರಾತ್ರಿ ಹೀಗೇ ಸಾಗಲಿ
ನನ್ನ ಮನದ ಮುಗಿಲು
ಕರಗುವುದು ನಿನ್ನ ಬೇಗೆಗೆ
ಕಾಯೋ ಕೆಲಸ ಪಡೆದು
ಉರಿಸುವೆನು ನಿನ್ನ ದೀವಿಗೆ
ಕಣ್ಣು ಮುಚ್ಚಿ ಮಾಡೋದಾ ಧ್ಯಾನ?
ಎದುರೇ ಕೂರು ಬಿಡದೆ ನನ್ನನ್ನ.. ನೀ..
ನಾ ನಿನ್ನವ... ನಾ ನಿನ್ನವ
ನಾ ನಿನ್ನವ... ನಾ ನಿನ್ನವ.. 

ನೀರವ ನೀನಿರೆ ಸಲ್ಲದು
ನೀರಸ ಎಂಬುದೇ ಆಗದು
ಕಾಲವನ್ನು ಕಟ್ಟಿ ಹಾಕೋ
ಜಾಲವೊಂದ ಹೆಣೆಯಬೇಕು
ಯಾವುದೇ ಹಂಗಿಗೆ ಸೋಲದೆ
ಜಾರುವ ಈ ಕ್ಷಣ ನಮ್ಮದೇ.. ಓ..

ಕಾದಿರುವೆನು ಮೂಡುವ ನಾಳೆಗೆ
ಹೊಸತೀ ದಿನವನು ಕೂಡಿಸೋ ಆಸೆಗೆ
ಏನೂ ಅರಿಯದೆ, ಎಲ್ಲ ಅರಿತು ಪ್ರೀತಿಸು
ಬಾಕಿ ಉಳಿದ ಕನಸು
ನಿಜವೇ ಆದಂತೆ ತೋಚಲಿ
ನಮ್ಮ ಹೆಜ್ಜೆ ಗುರುತು
ನಮಗೇ ಹೊಸತಾಗಿ ಕಾಣಲಿ
ನಿನ್ನ ಬಿಟ್ಟು ನನ್ನ ನೆರಳಿಲ್ಲ
ಇದಕಿಂತ ಹೇಳೊಕೇನೂ ಉಳಿದಿಲ್ಲ.. ಹಾ.. 
ನಾ ನಿನ್ನವ... ನಾ ನಿನ್ನವ
ನಾ ನಿನ್ನವ... ನಾ ನಿನ್ನವ.. 

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...