Friday, 3 April 2026

ನೀನಿರೆ ಜೊತೆ ಮಳೆ ಬರಿಸುವೆ

ನೀನಿರೆ ಜೊತೆ ಮಳೆ ಬರಿಸುವೆ

ನೀನಿರೆ ಜೊತೆ ಬಳೆ ತೊಡಿಸುವೆ
ನೀನಿರೆ ಜೊತೆ ನಾ ಬದುಕುವೆ 
ನೀನಿರೆ ಜೊತೆ ರಸವಶ ನಾನು 
ನೀನಿರೆ ಜೊತೆ ಪರಿತಪಿಸೆನು 
ನೀನಿರೆ ಜೊತೆ ನಾ ಬದುಕುವೆ 
ಹೇಗಾದರೂ 
ನಾ ಸೇರಲೇ ಬೇಕಿದೆ
ನಿನ್ನ ತೋಳನು
ನಾವಿಬ್ಬರೂ
ಒಂದಾಗಿಯೇ ರೂಪಿಸ-
-ಬೇಕು ಬಾಳನು
ಮನದಾಸೆಯ, ಮನದಾಸೆಯ 
ಪೂರೈಸೆಯಾ, ಮನದಾಸೆಯ 
ಕರುಣಿಸೆಯಾ...

ಆಕರ್ಶಣಿ ತುಸು ಹೆಚ್ಚಾಗಿದೆ
ಆಲೋಚನೆ ಇನ್ನು ಬರಿ ನಿನ್ನದೇ
ಹಾರಾಟಕೆ ಜೊತೆ ಬೇಕಾಗಲು
ಗರಿ ನೀಡುತಲೇ ನಿನ್ನ ಹೊತ್ತೊಯ್ಯಲೇ
ಪಾರಾಗುವ ದಾರಿ ಇನ್ನೆಲ್ಲಿದೆ
ಈ ಜೀವವ ನಿನಗೆ ಕೊಟ್ಟಾಗಿದೆ
ಸ್ವೀಕಾರ ಮಾಡದೆ ನೀ ಹೋದರೆ
ಕುದಿಯೋ ಕೊಪಕೆ ನಾ..  ಬಲಿಯಾಗುವೆ 

ನೀನಿರೆ ಜೊತೆ ಹೊಸ ಶುರುವಿದು
ನೀನಿರೆ ಜೊತೆ ಕತೆ ಮುಗಿಯದು
ನೀನಿರೆ ಜೊತೆ ನಾ ಬದುಕುವೆ
ನೂರಾರಿವೆ 
ನಿನ್ನ ಕುರಿತಾಗಿರೊ
ಚಂದ ಕಲ್ಪನೆ
ಬೇರೂರಿದೆ
ನಿರಾಕರಿಸೋ
ಮೊದಲೇ ಈ ಕಾಮನೆ
ಮನದಾಸೆಯ, ಮನದಾಸೆಯ 
ಪೂರೈಸೆಯಾ, ಮನದಾಸೆಯ

ಆ ಚಂದಿರ ಇಂದು ನನ್ನ ಜೊತೆ
ವಾದಕ್ಕೆ ಇಳಿವಾಗ ನಾ ಹೇಳುವೆ
ಬೆಳದಿಂಗಳೂ ನಾಚುವ ಅಂದವು
ಬರಿ ನಿಂದೇನೇ ಸರಿಸಾಟಿ ಬೇರಿಲ್ಲವೇ
ಮಣ್ಣಲ್ಲಿ ಜೀವಾಣು ಮೈನೆರೆಯುತ
ಚುಗುರೊಂದಕೆ ಹಾತೊರೆದಂತೆ
ನೀನಿದ್ದರೆ ಮರುಭೂಮಿ ಸಹ
ಒಂದು ಹೂದೋಟವೇನೇ.. ಆದಂತಿದೆ

ನೀನಿರೆ ಜೊತೆ ಹಸಿವಳಿವುದು
ನೀನಿರೆ ಜೊತೆ ಉಸಿರುಳಿವಿದು
ನೀನಿರೆ ಜೊತೆ ನಾ ಬದುಕುವೆ
ನೀನಿರೆ ಜೊತೆ ಬೆವರಿದು ಸಿಹಿ
ನೀನಿರೆ ಜೊತೆ ಒಲವಿಗೆ ಸಹಿ
ನೀನಿರೆ ಜೊತೆ ನಾ ಬದುಕುವೆ

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...