Friday, 3 April 2026

ಉತ್ತರ ಬಯಸಿದೆ

ಉತ್ತರ ಬಯಸಿದೆ 

ಕೇಳದ ಒಗಟು 
ಬಿಡಿಸಿ ಹೋಗುವೆಯಾ 
ಸಖಿ ಸೆರೆಯ ಬಿಡಿಸುವೆಯಾ 
ಹತ್ತಿರ ಇರಿಸುತ 
ಆಲಿಸದ್ಹೊರತು 
ತಿಳಿಯದೀ ವಿಷಯ 
ನನ್ನ ಮನಸಿನೊಳ ವಿಷಯ 
ಹೋದ ಸಲದ 
ಮುತ್ತಿನ ಸಾಲ 
ಮರಳಿಸುವೇನು 
ಬಿಗಿಯುತ ತೋಳ 
ನಿನಗೆ ಒಪ್ಪಿಗೆಯಾ 
ಎವೆ ಕಣ್ಣಿಗೆ ಅಪ್ಪುಗೆಯಾ!!

ಕೇಳಿಸೆಯಾ, ಕೇಳಿಸೆಯಾ
ಪ್ರೀತಿಯ ಪೀಸು ನುಡಿಯ 
ಮೊದಮೊದಲ ಕೋರಿಕೆಗೆ 
ಬೆಂಬಲ ನೀಡುವೆಯಾ?
ನಿನ್ನ ಜೊತೆಗೆ ಪಯಣ 
ಕೊನೆ ಇರದ ಕವನ 
ತೊರೆದು ಬಾಳುವುದು 
ಹೇಗೆ, ಹೇಗೆ 
ಹೇಗೆ ತಣಿಸುವುದು ಹುಚ್ಚು ಹೃದಯವ…

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...