Friday, 3 April 2026

ಹೇಳು ಕವಿದ ಮೇಘ

ಹೇಳು ಕವಿದ ಮೇಘ

ಹೇಳು ಕವಿದ ಮೇಘ
ಎದು ಎಂಥ ಚಂದ ಯೋಗ
ಧರೆಗಿಳಿದು ಬಂದ ಈಗ
ನಾ ನೆನೆದು ಹೋದೆ ನಿನ್ನ ಗುಂಗಲೇ
ನೀ ಬರದೆ ಹೋದರೇನು ಮಾಡಲೇ

ನಿನಗೇ ಎಲ್ಲ ಸಮಯ
ನಿನದೇ ನನ್ನ ಹೃದಯ
ಹರೆಯಕೊಂದು ಬಯಕೆಯಿಂದು
ನೀನೇ ಬೇಕು ಎಂಬುದಾಗಿ
ಸವಿಯ ಮಾತು ಸಿಹಿಯ ಜೇನು
ಸವಿದೆನೀಗ ಪ್ರೀತಿಯಾಗಿ
ಪರಿಸರ ಬದಲಾಗಿದೆ
ಅವಸರ ಅತಿಯಾಗುತಾ
ಕನಿಕರ ತುಸು ಇಲ್ಲವೇ
ಬಳಲುವೆ ದೂರಾಗುತಾ
ನಿನದೇ ಕನಸಿನಲಿ
ನನಗೆ ಪಾಲು ಕೊಡು
ಉಳಿವೆ ಕೊನೆವರೆಗೂ ನಗುತಾ
ಇರಿಸು ಮನಸಿನಲಿ
ನಿನ್ನ ಕವಿತೆಗಳ
ಓದೇ ಬರುವೆನು  ಅನವರತಾ
ನೀನಗಾಗೇ ನನ್ನ ತುಡಿತ...

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...