ನಾನು ನೀನೆಂಬ
ಬೇರೆ ಮಾಡೋ ಮಾತಿನ್ನೇಕೆ?
ನನ್ನಲ್ಲೇ ನೀನಿದ್ದರೆ
ಆಗುತ್ತ ಬಾಳಿಗಾಸರೆ
ಇನ್ನೇನೂ ಬೇಡ ಈ ಜೀವಕೆ
ಒಂದೇ ಮಾತಲ್ಲಿ
ಎಲ್ಲ ಹೇಳೋಕಾಗೋದಿಲ್ಲ
ಚೂರು ನೀನು ಸಿಕ್ಕರೆ
ಮನಸಾರೆ ಒಮ್ಮೆ ನಕ್ಕರೆ
ಮೇರೆನೇ ಇಲ್ಲ ಸಂತೋಷಕೆ
ನೂರಾರು ಸಂಜೆಯ ಮೀರಿತ್ತು
ಈ ಸಂಜೆ ವೇಳೆ ನೀ ಸಿಕ್ಕಾಗ
ಕಾಣೋದೆಲ್ಲ ಹೆಚ್ಚು ಚಂದನೇ
ಅನುರಾಗ ಮೂಡುವ ಹೊತ್ತಲ್ಲೇ
ಮನಸನ್ನು ನಿನಗೆ ಕೊಟ್ಟಾಗಿತ್ತು
ಬೇರೇನೂ ಬೇಡ ಸಾಕು ನೀನೇನೇ
ಇರು ಇರು ಜೊತೆಯಲಿ
ಎಲೆ ಮರೆ ಕತೆಯಲಿ
ನಾವಿಬ್ಬರೂ ಒಂದಾಗುವ ಏನಾಗಲಿ
ಅರೆ ಬರೆ ಆಸೆಯಿದು
ಹೊತ್ತು ತಂದೆ ಕಿಸೆಯಲಿ
ಎಷ್ಟು ಅಂತ ನಾನೊಬ್ಬನೇ ಒದ್ದಾಡಲಿ
ಬೆರೆತಾಗ ನಮ್ಮಯ ನೆರಳು
ಅಲ್ಲೊಂದು ಚಿತ್ತಾರ
ಈ ಕುರಿತು ಮಾತನಾಡೋಣ
ಕುಳಿತಾಗ ನಾವು ಇನ್ನೂ ಹತ್ತಿರ.. ಓ...
No comments:
Post a Comment