Friday, 3 April 2026

ಮೊದಲ ಭೇಟಿಯೇ

ಮೊದಲ ಭೇಟಿಯೇ 

ಒಲವ ಲಾಂಚನ 
ಮಧುರ ಮಾತಲಿ 
ಪ್ರೇಮಾಲಿಂಗನ ಸಖಿ 

ತುಟಿಯ ಗೀರುತಿಲೇ ಮೂಡಿ ಬಂದ ಕಿಡಿಯೇ
ಕಣ್ಣು ಕಣ್ಣಿನಲೇ ದೀಪ ಹೊತ್ತಿಸಿಡಲೇ?
ಉಸಿರು ಸೋಕಿದರೂ ಕರಗಿ ಬಿಡುವ ಹಿಮವೇ
ಗಾಳಿ ಕೆನ್ನೆ ಗುಳಿಯಲ್ಲಿ ಸುರುಳಿ ಬಿಡಲೇ
ಮರಳಿ ಬರೋ ಮಳೆ ಥರ
ಸುರಿವೆ ಸಿಗು ನಿರಂತರ
ಹೃದಯ, ಹೃದಯ
ನುಡಿವ ಸಮಯ
ಎಲ್ಲೆಲ್ಲೂ ಮೌನ ರಾಗವೇ!

ಪ್ರಣಯ ದೋಣಿಯಲಿ ದಾಟ ಬೇಕು ಕಡಲ
ಅಲೆಗಳನ್ನು ಬೆಂಬಲಕೆ ಕರೆದು ಬಿಡಲಾ?
ದೂರ ತೀರದಲಿ ನಮ್ಮದೊಂದು ಕವನ
ಮರಳ ಹಾಳೆಯನು ಮಡಿಸಿ ಕಿಸೆಗೆ ಇಡಲಾ?
ತಾರೆ ಅಗೋ ಸಜ್ಜಾಗಿವೆ
ಕೂಡೋದಕೆ ಮುಂದಾಗಿವೆ
ಬೆರೆಸಿ ಬರೆಯೋ, ಕಲೆಯ ಕಲಿತು
ಬಿಡಿಸೋಣ ಬಾಳ ನಕ್ಷೆಯ..

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...