ಬಣ್ಣಗಳು ನಾಚುತಿವೆ
ನಿನ್ನ ಕೆಂದಾವರೆ ಕೆನ್ನೆಯ ಕಂಡು ಓ ಕೋಮಲೆ
ಅಂಬರವೇ ಬಾಗುತಿದೆ
ನೀಳ ಕಾರ್ಮೋಡದ ರೀತಿ ಕುರುಳಲ್ಲಿ ನೀ ಕಂಡರೆ
ನೀನು ಉಸಿರಾಡೋ ಗಾಳಿನೇ ನನಗಿಷ್ಟ
ನೀನು ಮುಡಿವಾಗ ಹೂ-ದೇನೋ ಅದೃಷ್ಟ
ಅಂತೂ ಒಟ್ಟಾರೆ ನೀ ಸುಂದರ ರಸಕಾವ್ಯವೇ...
ನಿನಗಾಗಿ ನಾ ಕಂಡ ಕನಸೆಲ್ಲವೂ
ನಿಜವಾಗುವ ಹಾಗಿದೆ
ನಿನಗಾಗಿ ಬದುಕೋದೇ ನನ್ನ ಪಾಲಿಗೆ
ವರದಾನವೇ ಆಗಿದೆ
ನನ್ನಲ್ಲೇ ನಾನಿಂದು
ಕಾದಾಡಿ ಸಾಕಾಗಿದೆ
ಮುದ್ದಾಗಿ ನೀ ಬಂದು
ನನ್ನನ್ನು ಕಾಪಾಡಿದೆ
ನಾಳೆ ಎಲ್ಲೋ ಹೇಗೋ ಏನೋ ಆನ್ನೋ
ಭಯವೇ ಇಲ್ಲ ಈಗ
ನಿನ್ನ ಕಣ್ಣಿನಲ್ಲಿ ಕಣ್ಣ ಇಟ್ಟು
ನನ್ನ ಕಾಣೋವಾಗ
ಬಿಟ್ಟ ಸಾಲನ್ನು ತುಂಬೋಕೆ ಬಂದಂತೆ
ಎಲ್ಲ ಪುಟವನ್ನು ನಿನ್ನ ಮುಂದೆ ತೆರೆದಿಟ್ಟೆ
ಇನ್ನೂ ಬೇರೇನೂ ಬೇಕಿಲ್ಲವೇ ಈ ಬಾಳಿಗೆ...
ನಿನಗಾಗಿ ನಾ ಕಂಡ ಕನಸೆಲ್ಲವೂ
ನಿಜವಾಗುವ ಹಾಗಿದೆ
ನಿನಗಾಗಿ ಬದುಕೋದೇ ನನ್ನ ಪಾಲಿಗೆ
ವರದಾನವೇ ಆಗಿದೆ
No comments:
Post a Comment