Thursday, 15 December 2022

ನಾ ಎಂದೋ ಬರೆದ ಕವಿತೆ

 ನಾ ಎಂದೋ ಬರೆದ ಕವಿತೆ 

ನಿನಗಷ್ಟೇ ಹೊಂದುವುದು  
ಅದ ಒಪ್ಪಿಸು ಬೇಗನೆ ಎಂದು  
ತುಟಿಯಂಚಲಿ ನಿಂತಿಹುದು 
ನೀ ಮರೆತು ಹೋಗಿರೋ ಗುರುತು 
ನನ್ನಲ್ಲೇ ಉಳಿದಿಹಿದು
ಅದ ನೆನಪಿಸಲಾರದೆ ನಿನಗೆ
ನಾ ಹೇಗೆ ಉಳಿಯುವುದು

ಕರೆತರುವೆ ಎಲ್ಲ ನಿಮಿಷಗಳ
ಇನ್ನಷ್ಟು ಕಾತರಿಸಿ
ನೀ ನಡೆದು ಬರುವ ದಾರಿಯನು
ನಯವಾಗಿ ಸಿಂಗರಿಸಿ
ಬರೆದಿಡುವೆ ನೋಡು ಖುಷಿಗಳನು
ಬದುಕೆಲ್ಲ ಸಿಂಪಡಿಸಿ
ನೀ ಬೇಡವೆಂದರೆ ದೂರುಳಿವೆ
ಮಾತನ್ನು ಗೌರವಿಸಿ

ಈ ನೋವ ಭರಿಸುವ ಸುಖವು
ನನ್ನಲ್ಲೇ ಉಳಿದಿರಲಿ
ಅದರಲ್ಲಿ ಪಾಲಿನು ಕೊಡೆನು 
ಎಂದಷ್ಟೇ ನೆನಪಿರಲಿ 
ನಾ ಎಂದೋ ಬರೆದ ಕವಿತೆ 
ನಿನಗಷ್ಟೇ ಹೊಂದುವುದು  
ಅದ ಒಪ್ಪಿಸು ಬೇಗನೆ ಎಂದು  
ತುಟಿಯಂಚಲಿ ನಿಂತಿಹುದು 

ಹೇಳದೆ ಕೇಳದೆ

ಹೇಳದೆ ಕೇಳದೆ 

ಮಾಯವಾದಾಗ
ತಾಳದೆ ಹೋದೆನು
ಕಾಡುವ ರಾಗ
ಜೀವವೇ ನಿನ್ನನು
ನಂಬಿದೆ ಈಗ
ಯಾರಲಿ ಹೇಳಲಿ
ಇನ್ನುಳಿದ ಬಾಳಿನ ಮಾತಿನ ಭಾಗ... 

ನಿನ್ನಂತೆ ಬೇರೆ ಯಾರಿಲ್ಲ

ನಿನ್ನಂತೆ ಬೇರೆ ಯಾರಿಲ್ಲ 

ಮಾತನಾಡೋ ಮುದ್ದು ಶಿಲ್ಪವೇ  
ಕಣ್ಣಲ್ಲೇ ಮಾಡುತ ದಾಳಿ 
ಗೆಲ್ಲೋ ಮಾಯೆ ನಿನ್ನದಲ್ಲವೇ 
ಮನಸ್ಸು ಬೇಡಿದ, ಮಹತ್ವಾಕಾಂಕ್ಷೆಯೇ 
ವಿಶಾಲವಾದ ಆಕಾಶ ನೀನಲ್ಲವೇ  
ನಾ ಹಾರಿ ಬಂದೆ ಸಮೀಪ ಇದೋ ನೋಡೆಯಾ.. 

~~ ತಪಸ್ಸು ಮಾಡಿ ತಂದ ಎಲ್ಲ ವರಗಳು 
ಮಂಕಾಗಿಹೋದಹಾಗಿವೆ 
ಸಲೀಸು ನಿನ್ನ ಸೆಳೆಯಲೆಂದ ಹೂಗಳು 
ಇದೀಗ ತಾವೇ ನಾಚಿವೆ ~~ 

ದಿಕ್ಕು ತೋಚದಂತೆ, ಬೆಚ್ಚಿ ನಿಲ್ಲುವಾಗ 
ನಿನ್ನ ಧ್ಯಾನ ಮಾಡುವೆ 
ಹಣ್ಣು ಮಾಗಿತೆಂದು, ಕಚ್ಚಿ ತಿನ್ನುವಾಗ
ನಕ್ಕು ಸುಮ್ಮನಾಗುವೆ 
ಸಕಲ ನಿನ್ನಲ್ಲೇ ಎಂದಾಗ ಸಹಕರಿಸು 
ಉಸಿರ ಹಿಂಬಾಲಿಸಿ ಬರುವೆ ಸ್ಥಳವಿರಿಸು 
ಬಾಯಾರಿದಂತೆಯೇ ನೀ ಆಲಿಸು ಈ ಪ್ರೇಮ ಗೀತೆಯ  

ಏನೋ ಬಿಟ್ಟು ಹೋದೆ, ಅಂತ ಹೇಳಿಕೊಂಡು  
ಮತ್ತೆ ಕಾಣ ಬಂದರೆ 
ನೀನೂ ಕೂಡ ಅಲ್ಲೇ, ಏನೋ ಹುಡುಕುವಂತೆ 
ನನ್ನ ಕೈಗೆ ಸಿಕ್ಕರೆ 
ಬರೆದ ಸಾಲೆಲ್ಲ ಸಾಲಲ್ಲ ಅನಿಸಿರಲು 
ಹರಿದು ಇನ್ನೆಲ್ಲಿ ಮೂಡೋದು ಕವಿತೆಗಳು 
ಒಂದೊಂದೂ ಹೆಜ್ಜೆಯ ಸತಾಯಿಸಿ ಜೊತೆಗೆ ಸಾಗುವ

ಅಲೆಗಳ ನೋಡುತ ಕಾಡುವ ನೆನಪಿ‍ಗೆ

ಅಲೆಗಳ ನೋಡುತ ಕಾಡುವ ನೆನಪಿ‍ಗೆ

ಮಳೆಯಲಿ ನೆನೆಯುತ ಮೂಡುವ ಬಯಕೆಗೆ
ಈ ತೀರಕೆ, ಆ ತೀರವು
ಸಂದೇಶವ ರವಾನೆ ಮಾಡಿದೆ
ನಾನೀಗಲೇ ಈ ಅಲೆಗಳ ಆಲಿಸಿ
ಮಳೆ ಹನಿಗಳ ಒಳದನಿಯನು ಸೇರಿಸಿ
ಹಾಡುವ ಬಯಕೆಯು ನೆನಪಿನ ಹಾಡನು...

ನಾ ನಿನ್ನ ನೋಡಿ

ನಾ ನಿನ್ನ ನೋಡಿ 

ನಿಂತಲ್ಲೇ ಕುಸಿದು ಬಿದ್ದೆ 
ಸಂಕೋಚ ಬಿಟ್ಟು 
ಹಿಂದಿಂದೆ ಅಲೆದು  ಬಂದೆ 
ಈಗೀಗ ಯಾಕೋ 
ಬರುತಾನೇ ಇಲ್ಲ ನಿದ್ದೆ 
ನೀ ಸಿಗದೇ ಹೋಗಿ 
ಆದಂತೆ ಕಣ್ಣು ಒದ್ದೆ
ಏನೇ ಸದ್ದಾದರೂ 
ನೀನೇ ಹೊಣೆಯೆನ್ನುವೆ
ನಿನ್ನ ಮುದ್ದಾಡಲು 
ತುದಿಗಾಲಲ್ಲಿ ನಿಂತಿರುವೆ 

ಎಲ್ಲ ಕಡೆಯಲ್ಲೂ ನಿನ್ನ 
ನನ್ನ ಹೆಸರನ್ನು ಗೀಚಿ 
ಏನೋ ಸಂತೋಷ ನನಗೆ ಹೇಳೋಕಾಗದೇ 
ನಾವು ಹೋದಲ್ಲೇ ಹಿಂದೆ 
ತಾನಾಗಿ ತೇಲಿ ಬಂದ 
ಮುಗಿಲೊಂದು ಕರಗಿ ಮಳೆಗೆ ಸಿಕ್ಕಂತಾಗಿದೆ 
ನಾಪತ್ತೆ ಆಗಿ 
ನೀ ಮತ್ತೆ ಮೂಡೋ ತಾರೆ 
ನಿನ್ನೊಂದೊಗೇನೇ 
ನಾ ಮಿಂಚೊದು ಮನಸಾರೆ 
ಬೇಜಾನು ವಿಷಯ 
ಹೇಳಿದ್ದು ಚೂರು ಚೂರೇ 
ಯಾವತ್ತೂ ಕೂಡ 
ನಾ ನಿನ್ನ ಬಿಟ್ಟಿರಲಾರೆ 

ಕನ್ನಡಿಯೇ, ಕನ್ನಡಿಯೇ

ಕನ್ನಡಿಯೇ, ಕನ್ನಡಿಯೇ 

ನಗುವ ಮುನ್ನ ಮಾತಾಡಿಸು 
ಸನ್ನೆಗಳ ಚಿನ್ಹೆಯನು
ಕಣ್ಣಿನಲ್ಲೇ ಸಿಂಪಡಿಸು 
ಸರಿದಾಗಲೇ ಸಂಕೋಚ
ಅಸಲಿ ವೇದಿಕೆ
ಮನದಾಸೆಯ ಇಡುವಾಗ
ಇರಲಿ ಪೀಠಿಕೆ
ಹೊರಟಾಗಿದೆ ಮರುಳಾಗಿ 
ಎಲ್ಲಿಗೆಂದು ಕೇಳಿ ನಿಲ್ಲಿಸೆಯಾ.. 

ಆಳವಾಗಿ ಎದೆಯಲ್ಲಿ 
ಸೇರಿ ಹೋದೆ ಕ್ಷಣದಲ್ಲಿ 
ಮಾತಿನ ನಡುವೆ, ಏತಕೆ ನಗುವೆ?
ನೇರವಾಗಿ ವಿಷಯಕ್ಕೆ 
ಬಂದು ಬಿಡುವೆ ಭರದಲ್ಲಿ 
ಹೇಳದೆ ಉಳಿಯೇ ಇಲ್ಲದ ಗೊಡವೆ 
ತಂಗಾಳಿ ಸುಳಿದಾಗ ನಮ್ಮ ದಿಕ್ಕಿಗೆ 
ನವಿರಾಗಿ ನೀ ಜಾರು ನನ್ನ ತೆಕ್ಕೆಗೆ

 
ಕಿರಿದಾಗಿರೋ ಈ ದಾರಿ 
ತಲುಪಿತೆಲ್ಲಿಗೆ 
ಕನಸಲ್ಲಿಯೂ ನಿನದೇನೆ 
ನಗುವ ಸಂತೆ 

ಯಾರು ಕಂಡವರು

ಯಾರು ಕಂಡವರು 

ಆ ಕಡಲಿನ ಆಳವನು 
ಯಾರು ಬಲ್ಲವರು 
ತಂಗಾಳಿ ಮೂಲವನು 
ಎಲ್ಲಿ ದೊರಕುವುದು 
ನೋವಿರದ ಗೆಲುವುಗಳು 
ನಮ್ಮ ನಡುವಿನಲೇ 
ಇವೆ ಸಾಧನೆ ಮೂಲಗಳು 
ಬೀಳುವ ಏಳುವ 
ಅಲೆಗಳಿಗೆ ದಣಿವೆಲ್ಲಿ 
ಕಾದಿರೋ ತೀರಕೆ 
ಏಕಾಂತದ ದಿಗಿಲೆಲ್ಲಿ?

ಕೊಟ್ಟ ಮಾತನು ತಪ್ಪ ಬಾರದು 
ಏನೇ ಆದರೂ ಬಾಳಿನಲಿ 
ಬಿಟ್ಟು ಬಂದಿರೋ ಹೆಜ್ಜೆ ಗುರುತ
ಬರುವವರು ಹಿಂಬಾಲಿಸಲಿ 
ಕಟ್ಟಿಕೊಂಡಿರೋ ನೆನಪುಗಳೇ 
ನಾಳೆಗಳ ಮಾಲಾರ್ಪಣೆಗೆ 
ಸುತ್ತ ಮುತ್ತಲೂ ಪಸರಿಸುವ 
ಎಂದೂ ಬಾಡದ ಮುಗುಳುನಗೆ 
ಇರಲಿ ಸಹನೆ 
ಮಮತೆ, ಕರುಣೆ 
ಬಾಳು ಅಂದುಕೊಂಡಿದ್ದಕ್ಕಿಂತಲೂ ಸುಂದರ 
ಬೇಡ ಬಣ್ಣ ಹಚ್ಚಿ ಬಂದರೂನು ಪಂಜರ 
ಹಾರೋಣ ಬಾನಿನೆತ್ತರ 

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...