Thursday, 15 December 2022

ಅಲೆಗಳ ನೋಡುತ ಕಾಡುವ ನೆನಪಿ‍ಗೆ

ಅಲೆಗಳ ನೋಡುತ ಕಾಡುವ ನೆನಪಿ‍ಗೆ

ಮಳೆಯಲಿ ನೆನೆಯುತ ಮೂಡುವ ಬಯಕೆಗೆ
ಈ ತೀರಕೆ, ಆ ತೀರವು
ಸಂದೇಶವ ರವಾನೆ ಮಾಡಿದೆ
ನಾನೀಗಲೇ ಈ ಅಲೆಗಳ ಆಲಿಸಿ
ಮಳೆ ಹನಿಗಳ ಒಳದನಿಯನು ಸೇರಿಸಿ
ಹಾಡುವ ಬಯಕೆಯು ನೆನಪಿನ ಹಾಡನು...

ನಾ ನಿನ್ನ ನೋಡಿ

ನಾ ನಿನ್ನ ನೋಡಿ 

ನಿಂತಲ್ಲೇ ಕುಸಿದು ಬಿದ್ದೆ 
ಸಂಕೋಚ ಬಿಟ್ಟು 
ಹಿಂದಿಂದೆ ಅಲೆದು  ಬಂದೆ 
ಈಗೀಗ ಯಾಕೋ 
ಬರುತಾನೇ ಇಲ್ಲ ನಿದ್ದೆ 
ನೀ ಸಿಗದೇ ಹೋಗಿ 
ಆದಂತೆ ಕಣ್ಣು ಒದ್ದೆ
ಏನೇ ಸದ್ದಾದರೂ 
ನೀನೇ ಹೊಣೆಯೆನ್ನುವೆ
ನಿನ್ನ ಮುದ್ದಾಡಲು 
ತುದಿಗಾಲಲ್ಲಿ ನಿಂತಿರುವೆ 

ಎಲ್ಲ ಕಡೆಯಲ್ಲೂ ನಿನ್ನ 
ನನ್ನ ಹೆಸರನ್ನು ಗೀಚಿ 
ಏನೋ ಸಂತೋಷ ನನಗೆ ಹೇಳೋಕಾಗದೇ 
ನಾವು ಹೋದಲ್ಲೇ ಹಿಂದೆ 
ತಾನಾಗಿ ತೇಲಿ ಬಂದ 
ಮುಗಿಲೊಂದು ಕರಗಿ ಮಳೆಗೆ ಸಿಕ್ಕಂತಾಗಿದೆ 
ನಾಪತ್ತೆ ಆಗಿ 
ನೀ ಮತ್ತೆ ಮೂಡೋ ತಾರೆ 
ನಿನ್ನೊಂದೊಗೇನೇ 
ನಾ ಮಿಂಚೊದು ಮನಸಾರೆ 
ಬೇಜಾನು ವಿಷಯ 
ಹೇಳಿದ್ದು ಚೂರು ಚೂರೇ 
ಯಾವತ್ತೂ ಕೂಡ 
ನಾ ನಿನ್ನ ಬಿಟ್ಟಿರಲಾರೆ 

ಕನ್ನಡಿಯೇ, ಕನ್ನಡಿಯೇ

ಕನ್ನಡಿಯೇ, ಕನ್ನಡಿಯೇ 

ನಗುವ ಮುನ್ನ ಮಾತಾಡಿಸು 
ಸನ್ನೆಗಳ ಚಿನ್ಹೆಯನು
ಕಣ್ಣಿನಲ್ಲೇ ಸಿಂಪಡಿಸು 
ಸರಿದಾಗಲೇ ಸಂಕೋಚ
ಅಸಲಿ ವೇದಿಕೆ
ಮನದಾಸೆಯ ಇಡುವಾಗ
ಇರಲಿ ಪೀಠಿಕೆ
ಹೊರಟಾಗಿದೆ ಮರುಳಾಗಿ 
ಎಲ್ಲಿಗೆಂದು ಕೇಳಿ ನಿಲ್ಲಿಸೆಯಾ.. 

ಆಳವಾಗಿ ಎದೆಯಲ್ಲಿ 
ಸೇರಿ ಹೋದೆ ಕ್ಷಣದಲ್ಲಿ 
ಮಾತಿನ ನಡುವೆ, ಏತಕೆ ನಗುವೆ?
ನೇರವಾಗಿ ವಿಷಯಕ್ಕೆ 
ಬಂದು ಬಿಡುವೆ ಭರದಲ್ಲಿ 
ಹೇಳದೆ ಉಳಿಯೇ ಇಲ್ಲದ ಗೊಡವೆ 
ತಂಗಾಳಿ ಸುಳಿದಾಗ ನಮ್ಮ ದಿಕ್ಕಿಗೆ 
ನವಿರಾಗಿ ನೀ ಜಾರು ನನ್ನ ತೆಕ್ಕೆಗೆ

 
ಕಿರಿದಾಗಿರೋ ಈ ದಾರಿ 
ತಲುಪಿತೆಲ್ಲಿಗೆ 
ಕನಸಲ್ಲಿಯೂ ನಿನದೇನೆ 
ನಗುವ ಸಂತೆ 

ಯಾರು ಕಂಡವರು

ಯಾರು ಕಂಡವರು 

ಆ ಕಡಲಿನ ಆಳವನು 
ಯಾರು ಬಲ್ಲವರು 
ತಂಗಾಳಿ ಮೂಲವನು 
ಎಲ್ಲಿ ದೊರಕುವುದು 
ನೋವಿರದ ಗೆಲುವುಗಳು 
ನಮ್ಮ ನಡುವಿನಲೇ 
ಇವೆ ಸಾಧನೆ ಮೂಲಗಳು 
ಬೀಳುವ ಏಳುವ 
ಅಲೆಗಳಿಗೆ ದಣಿವೆಲ್ಲಿ 
ಕಾದಿರೋ ತೀರಕೆ 
ಏಕಾಂತದ ದಿಗಿಲೆಲ್ಲಿ?

ಕೊಟ್ಟ ಮಾತನು ತಪ್ಪ ಬಾರದು 
ಏನೇ ಆದರೂ ಬಾಳಿನಲಿ 
ಬಿಟ್ಟು ಬಂದಿರೋ ಹೆಜ್ಜೆ ಗುರುತ
ಬರುವವರು ಹಿಂಬಾಲಿಸಲಿ 
ಕಟ್ಟಿಕೊಂಡಿರೋ ನೆನಪುಗಳೇ 
ನಾಳೆಗಳ ಮಾಲಾರ್ಪಣೆಗೆ 
ಸುತ್ತ ಮುತ್ತಲೂ ಪಸರಿಸುವ 
ಎಂದೂ ಬಾಡದ ಮುಗುಳುನಗೆ 
ಇರಲಿ ಸಹನೆ 
ಮಮತೆ, ಕರುಣೆ 
ಬಾಳು ಅಂದುಕೊಂಡಿದ್ದಕ್ಕಿಂತಲೂ ಸುಂದರ 
ಬೇಡ ಬಣ್ಣ ಹಚ್ಚಿ ಬಂದರೂನು ಪಂಜರ 
ಹಾರೋಣ ಬಾನಿನೆತ್ತರ 

ಆದಾಗಿಗಿಂತ ಗಾಯ

ಆದಾಗಿಗಿಂತ ಗಾಯ 

ಕಾಡೋದು ಆರೋವಾಗ 
ಏನೊಂದೂ ತೋಚದು ಈಗ 
ಈ ದಾರಿ ನಿಂತಿರುವಾಗ 
ನೀ ದೂರವಾದೆ ಏಕೆ 
ಕಣ್ಣೀರು ಜಾರೋವಾಗ... 

ಬೇಕೆನ್ನುವಾಗ ಬರದೆ
ಸಾಕೆನ್ನುವಾಗ ಬರುವೆ
ಕನಸೆಂಬ ಕನ್ನಡಿಯಲ್ಲಿ
ನೀ ಮಾತ್ರ ಏತಕೋ ನಗುವೆ
ಮಳೆಗಾಲವಾದರೂ ಇನ್ನೂ
ಬಿರುಕಲ್ಲೇ‌ ನನ್ನಯ ಜಾಗ
ನೀ ಆಗಬೇಕಿದೆ ಇನ್ನೂ
ಈ ನನ್ನ ಜೀವದ ಭಾಗ
ನೀ ದೂರವಾದೆ ಏಕೆ
ಕಣ್ಣೀರು ಜಾರೋವಾಗ... 

ಇನ್ನೆಲ್ಲಿದೆ ವಿರಾಮ
ಅಲೆದಾಡಿಸಿರುವೆ ಬಿಡದೇ
ಬಾಳೆಂಬ ಕಾದಂಬರಿಯ
ಕಳುವಾದ ಹಾಳೆಯು ನಿನದೇ
ಗಡಿಯಾರ ಮುಳ್ಳಿನ ಹಾಗೆ
ಅನುರಾಗ ಇರಿದಿರುವಾಗ
ಬಿಡಿಯಾಗಿ ಬಿಡಿಸಿದರೂನೂ
ಕಹಿ ನೆನಪೇ ಮೂಡಿರುವಾಗ 
ನೀ ದೂರವಾದೆ ಏಕೆ
ಕಣ್ಣೀರು ಜಾರೋವಾಗ... 

ಹೇಳಿ ಆಗಿರುವಾಗ

ಹೇಳಿ ಆಗಿರುವಾಗ 

ಕೇಳಿಯೂ ಹೋಗು 
ನೀ ನನ್ನ ಮರೆಯುವ ಮುನ್ನ 
ಮನಸಿಲ್ಲಿಯೇ ಕೂಗು 
ರಾತ್ರಿ ಬೀಳುವ ಕನಸೇ 
ತುಸು ಮೆಲ್ಲಗೆ ಸಾಗು 
ನೀ ತಂದ ಬೆಳಕನು ನೀನೇ 
ಅಳಿಸುತ್ತ ಮರೆಯಾಗು 
ನೋವನ್ನು ಸಹಿಸುವ ಕಲೆಯ 
ಕಲಿಸುತ್ತ ಗುರುವಾಗು 
ಮುಳುಗಡೆಯ ಭೀತಿಯ ನಡುವೆ 
ಸಾವಿತ್ತು ನೆರವಾಗು.. 

No matter where you are
No matter where you are
You shall stay in my heart forever... 

ಮೈಸೂರ ಹೆಣ್ಣಿವಳೋ

 ಮೈಸೂರ ಹೆಣ್ಣಿವಳೋ

ಕಣ್ಣಲ್ಲೇ ಬಾಣ ಹೂಡುವಳು.. ಓ...
ಮಾತೊಂದೂ ಆಡದೆಲೆ
ಹೃದಯನ ದೋಚಿ ಹೋಗುವಳು.. ಓ..
ಚಂದಿರನ ಹೋಲುವ ಚಹರೆ
ಹಾರಾಡೋ ಸುಂದರ ಹೆರಳೇ
ಹೊಸೆದಂತೆ ಮುತ್ತಿನ ಮಾಲೆ
ನೋಟಕ್ಕೆ ತಂಪು ನೀಡುವಳು.. ಓ..
ಹೇ... ಬಾ ಬಾರೆ
ಒಲವೇ.. ಬಾ ಬಾರೆ.. ಟರ್ರ್.ಆ..

ಹೇ... ಬಾ ಬಾರೆ
ತೋಳಲ್ಲೇ.. ನೀ ಸೇರೇ.. ಟರ್ರ್.ಆ..

ಮೈಸೂರ ಹೆಣ್ಣಿವಳೋ
ಕಣ್ಣಲ್ಲೇ ಬಾಣ ಹೂಡುವಳು.. ಓ...
ಎದೆಯಲ್ಲಿ ಮಿನುಗುವ ತಾರೆ
ಒಲವ ದಣಿವಾರಿಸೋ ನೀರೆ
ಏರು ಪೇರಾಗಿದೆ ಉಸಿರೇ
ಅಮಲೇರಿದಂತೆ ಸಾಗುತಿದೆ.. ಓ..
ಹೇ... ಬಾ ಬಾರೆ
ಒಲವೇ.. ಬಾ ಬಾರೆ.. ಟರ್ರ್.ಆ..

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...