Friday, 22 November 2019
ಪ್ರಾಣಾನೇ ಪಣವಾಗಿಟ್ಟು ಪ್ರೀತಿಗಾಗಿ
ಪ್ರಾಣಾನೇ ಪಣವಾಗಿಟ್ಟು ಪ್ರೀತಿಗಾಗಿ
ಜೋಪಾನ ಮಾಡಿಕೊಂಡ ಪ್ರೇಮಿ ನಾನು
ಕಣ್ಣಲ್ಲಿ ಕಣ್ಣ ಇಟ್ಟು ನೋಡು ಈಗ
ಕಣ್ಣೀರೂ ನಿನ್ನ ಧ್ಯಾನ ಮಾಡೋದನ್ನು
ತೀರದಂಥ ಈ ನೋವಲ್ಲೂ, ಮತ್ತೆ ಹೇಳುವೆ ನೀ ಕೇಳು
ಜೀವಮಾನಕೆ ನೀನಷ್ಟೇ ಬೇರೆ ಯಾರಿಲ್ಲ
ಗಾಳಿ ಮಾತಿಗೆ ಮರುಳಾಗಿ, ಗೇಲಿ ಮಾಡುವೆ ಹೀಗೇಕೆ
ನಿನ್ನ ಬಿಟ್ಟರೆ ಈ ಹೃದಯ ಮಿಡಿಯೋ ಹಾಗಿಲ್ಲ
ಸರಿಯಾ ಹೇಳು ಇದು ಸರಿಯಾ ಹೇಳು?
ಕೊಲ್ಲು ನನ್ನ ಒಂಟಿ ಮಾಡೋ ಬದಲು
ಸರಿಯಾ ಹೇಳು ಇದು ಸರಿಯಾ ಹೇಳು?
ಕೇಳೋರಿಲ್ಲ ಈ ಮನದ ಗೋಳು....
ಹಾಡೊಂದು ಮುಗಿದಾಗ, ಬಿಡದೆ ಕಾಡುವ ರಾಗ
ಅನುರಾಗವೇ ಅನುಮಾನಿಸಿ ಏಕೆ ದೂರವಾದೆ
ಸಾವೊಂದು ಎದುರಾಗಿ, ಕಷ್ಟ ಹೇಳಿಕೊಂಡಾಗ
ಆ ಸಾವಿಗೂ ಸಂತೈಸುತ ದುಃಖನ ತಂದೆ
ಜೋಡಿ ಹೆಜ್ಜೆಯ ಬೇಡಿಕೊಂಡಿದೆ ನಾನು ಹೊರಟಿರೋ ದಾರಿ
ನೀನು ಬಾರದೆ ಚೂರೂ ಸಾಗದು ಏನು ಮಾಡಲಿ ನಾ?
ಕಾದು ಬೆಂದಿರೋ ಮೂಖ ವೇದನೆ ಗೀಚಿ ಹೇಳುವೆ ನಿಲ್ಲು
ಕೋಪವನ್ನು ನೀ ಸಾಕು ಮಾಡದೆ ಹೇಗೆ ಉಳಿಯಲಿ ನಾ..?
ಸರಿಯಾ ಹೇಳು ಇದು ಸರಿಯಾ ಹೇಳು?
ನಿನ್ನ ವಿನಹ ಖಾಲಿ ನನ್ನ ಬಾಳು
ಸರಿಯಾ ಹೇಳು ಇದು ಸರಿಯಾ ಹೇಳು?
ಕೇಳಿ ಹೋಗು ನನ್ನ ಮನದ ಗೋಳು....
Thursday, 21 November 2019
ಹೊಸತನ
ಹೊಸ ಪೊರಕೆಗೆ ಮನೆಯೆಲ್ಲ ಹೂವು
ಹೊಸ ಎಕ್ಕಡ ಕಾಲ ಕಚ್ಚಿದವು
ಹೊಸ ಮಡಿಕೆಯ ನೀರು ನೀರಸ
ಹೊಸ ಒಲೆಗೆ ಸೌದೆ ಪಾಯಸ
ಹೊಸ ಪಾತ್ರೆಯೂ ತಳ ಹಿಡಿಯಿತು
ಹೊಸ ಮನೆಯಲೂ ಕಸ ಹೊಕ್ಕಿತು
ಹೊಸ ಅಕ್ಕಿ ಮುದ್ದೆ ಕಟ್ಟಿತು
ಕೆಂಪು ರಾಗಿ ಗಂಟು ಬಿಗಿಯಿತು
ಹೊಸ ಬಣ್ಣ ಬಳಿದ ಗೋಡೆಗೆ
ಹಳೆ ಕನ್ನಡಿ ಜೋತುಕೊಂಡಿತು
ಹೊಸ ಜೋಡಿಗೆ ಮರದ ಬಾಗಿಲು
ಹಳೆ ಸೇರು ಹೊಸ್ತಿಲಾಯಿತು
ಹೊಸ ಬೆಳಕು ಛಾಯೆ ಮೂಡಲು
ಹೊಸ ಋಜುವು ಕನಸ ಕಾಣಲು
ಹೊಸ ನಾಳೆಗೆ ಅದೇ ಕಣ್ಣು
ಹೊಸತನವನು ಪಸರೋ ಮಣ್ಣು
ಹಳೆ ಕಿಸೆಯಲಿ ಹೊಸ ಕಾಸು
ಹಳೆ ಕಾಸಿಗೆ ಹೊಸ ಅಂಗಿ
ಹಳೆ ಪದ್ಯಕೆ ಹೊಸ ರಾಗ
ಹಳೆ ಹಕ್ಕಿಗೆ ಹೊಸ ಚಿಗುರು
ದಾರಿ ತಿರುವಲಿ ಹೊಸ ಪರಿಚಯ
ಹೊಸ ಒಲವು ಪ್ರತಿ ಸಲವೂ
ಕೈ ತುತ್ತಿಗೆ ರುಚಿ ಇಮ್ಮಡಿ
ಹುಸಿ ತೇಗು, ಹೊಸ ಹಸಿವು
ಕಸಿಗೊಂಡರೆ ಹೊಸ ಮೊಗ್ಗು
ಪಕಳೆ ಕೆನ್ನೆಗೆ ಹೊಸ ಸಿಗ್ಗು
ಮುತ್ತು ಹಳೆಯದು ಮತ್ತು ಹೊಸತು
ನಲ್ಮೆ ಬಾಳ್ಮೆಗೆ ಒಲಿದ ಸ್ವತ್ತು
ಮಮತೆ, ಕರುಣೆ ಒಲುಮೆ ರೂಪ
ನುರಿತ ಸಮಯಕೆ ನಾಳೆ ಹೊಸತು....
ಹೊಸ ಒಲವು ಪ್ರತಿ ಸಲವೂ
ಕೈ ತುತ್ತಿಗೆ ರುಚಿ ಇಮ್ಮಡಿ
ಹುಸಿ ತೇಗು, ಹೊಸ ಹಸಿವು
ಕಸಿಗೊಂಡರೆ ಹೊಸ ಮೊಗ್ಗು
ಪಕಳೆ ಕೆನ್ನೆಗೆ ಹೊಸ ಸಿಗ್ಗು
ಮುತ್ತು ಹಳೆಯದು ಮತ್ತು ಹೊಸತು
ನಲ್ಮೆ ಬಾಳ್ಮೆಗೆ ಒಲಿದ ಸ್ವತ್ತು
ಮಮತೆ, ಕರುಣೆ ಒಲುಮೆ ರೂಪ
ನುರಿತ ಸಮಯಕೆ ನಾಳೆ ಹೊಸತು....
Wednesday, 13 November 2019
ಅಮ್ಮ
ಅಮ್ಮ ಅಂದು ನಾ
ಮಣ್ಣು ತಿಂದ ತಪ್ಪಿಗೆ
ನೀನು ಇತ್ತ ದಂಡನೆ
ಇನ್ನೂ ನೆನಪಿದೆsssss
ಅಮ್ಮ ಅಂದು ನಾ
ಎಡವಿ ಗಾಯಗೊಂಡರೆ
ನೀನು ಪಟ್ಟ ವೇಧನೆ
ಇನ್ನೂ ನೆನಪಿದೆsssss
ಅಮ್ಮ ಈ ಕಂದನ
ಎದೆಗೆ ಅಪ್ಪಿ ಹಾಡಿದ
ಲಾಲಿ ಹಾಡಿನ ಸವಿ
ಇನ್ನೂ ನೆನಪಿದೆ... (೧)
ಹಗಲು ರಾತ್ರಿ ಕನಸ ಹೊಸೆದು
ಕೌದಿ ಮಾಡಿ ಹೊದ್ದಿಸಿ
ತೋರು ಬೆರಳ ಹಿಡಿದು ಮೆಲ್ಲ
ಹೆಜ್ಜೆ-ಹೆಜ್ಜೆ ಸೇರಿಸಿ
ಹೆಜ್ಜೆ-ಹೆಜ್ಜೆ ಸೇರಿಸಿ
ತಿದ್ದಿ ತೀಡಿ ಅಕ್ಷರಗಳ
ಅರ್ಥವನ್ನು ರೂಪಿಸಿ
ಗದ್ದಲವ ಗೆಲ್ಲುವಂಥ
ಮೌನವನ್ನು ಜ್ಞಾಪಿಸಿ
ಎಷ್ಟೇ ಜನುಮ ಕಳೆದು
ಲೋಕ ಗೆದ್ದು ಬಂದರೂ
ನಿನ್ನ ಮಡಿಲ ನಿದ್ದಿಗಿಂತ
ಯಾವ ಸೊಗಸಿದೆ.. (೨)
ಅಮ್ಮ....
Friday, 8 November 2019
ಬರೆದು ಕೆಟ್ಟವರದೆಷ್ಟೋ ....
ಪೋಣಿಸಿ ಅರೆಬೆಂದ ಪದ್ಯ
ನಿನ್ನ ಓದಿಗೆ ಕೊಟ್ಟೆ
ನೀನೋ ಗೀಚುಹೊತ್ತಿಗೆ ಕಸಿದು
ಒಡೆದ ಸಾಲುಗಳನ್ನು ಮರು ಜೋಡಿಸಿಕೊಂಡು
ನಿನಗೆ ತೋಚಿದ ಹಾಗೆ ಅರ್ಥ ಕಲ್ಪಿಸಿಕೊಂಡೆ
"ವ್ಯರ್ಥ ಸಮಯ ಏಳು ಕತ್ತಲಾಯಿತು"
ದೀಪ ಹೊನಲಿಗೆ ನಿನ್ನ ನೆರಳು ಉತ್ತರಿಸಿತು
"ನನ್ನ ಕಲ್ಪಿಸಿಕೊಂಡವನ ಕಲ್ಪನೆಯ ಸುತ್ತ
ನನ್ನ ಮೀರಿದ ವ್ಯಾಪ್ತಿಯಾಳ ಅರಿವಾಯಿತು!"
ಅನುಮಾನ ಎಲ್ಲೆಲ್ಲೂ, ಒಮ್ಮೊಮ್ಮೆ ಹಿಗ್ಗು
ಇನ್ನೆಲ್ಲೋ ತೋಚದೆ ಸಂಕೋಚ, ಸಿಗ್ಗು
ಏನೋ ಗೊಂದಲ, ಪ್ರಶ್ನೆಗಳ ಗದ್ದಲ
ಕಣ್ಣ ಬಾಷ್ಪಗಳೆಲ್ಲಕೂ ಸಮಾನ ಉತ್ತರ
ಮೊನಚಿನ ಮೊಂಡು ಹಿಡಿ ಬಿಗಿದು
ಝಳಪಿಸಿದಂತೆ ಕಣ್ಣ ಪ್ರಭೆಗೆ
ದಿಗ್ಭ್ರಮೆಗೊಂಡು ನಿದ್ದೆ ಬರದಿರಲು
ಗಂಟಲೊಣಗಿ ಭಯವ ನುಂಗಿಕೊಂಡೆ
ಖಾಲಿ ಬಿಟ್ಟ ಪುಟಗಳಿಗಿಂತ
ಹರಿದು ಗೊಬ್ಬರವಾದವುಗಳೇ ಲೇಸು
ಇತ್ತ ಏದುಸಿರು ಬಿಡುತ್ತ
ನನ್ನತ್ತ ದಿಟ್ಟಿಸುತ್ತಿವೆ ಒತ್ತ(ಡ)ಕ್ಷರಗಳು
ಪದ್ಯ ಬಿಡಿಸಿ ಹೇಳಲಾಗದು
ಹಾಗೆಂದು ಕಟ್ಟಿ ಹಾಕಲೂ ಕೂಡದು
ಕೆಟ್ಟು ಬರೆದವರೆಷ್ಟು ಮಂದಿಯೋ
ಬರೆದು ಕೆಟ್ಟವರದೆಷ್ಟೋ ....
ನಿನ್ನ ಓದಿಗೆ ಕೊಟ್ಟೆ
ನೀನೋ ಗೀಚುಹೊತ್ತಿಗೆ ಕಸಿದು
ಒಡೆದ ಸಾಲುಗಳನ್ನು ಮರು ಜೋಡಿಸಿಕೊಂಡು
ನಿನಗೆ ತೋಚಿದ ಹಾಗೆ ಅರ್ಥ ಕಲ್ಪಿಸಿಕೊಂಡೆ
"ವ್ಯರ್ಥ ಸಮಯ ಏಳು ಕತ್ತಲಾಯಿತು"
ದೀಪ ಹೊನಲಿಗೆ ನಿನ್ನ ನೆರಳು ಉತ್ತರಿಸಿತು
"ನನ್ನ ಕಲ್ಪಿಸಿಕೊಂಡವನ ಕಲ್ಪನೆಯ ಸುತ್ತ
ನನ್ನ ಮೀರಿದ ವ್ಯಾಪ್ತಿಯಾಳ ಅರಿವಾಯಿತು!"
ಅನುಮಾನ ಎಲ್ಲೆಲ್ಲೂ, ಒಮ್ಮೊಮ್ಮೆ ಹಿಗ್ಗು
ಇನ್ನೆಲ್ಲೋ ತೋಚದೆ ಸಂಕೋಚ, ಸಿಗ್ಗು
ಏನೋ ಗೊಂದಲ, ಪ್ರಶ್ನೆಗಳ ಗದ್ದಲ
ಕಣ್ಣ ಬಾಷ್ಪಗಳೆಲ್ಲಕೂ ಸಮಾನ ಉತ್ತರ
ಮೊನಚಿನ ಮೊಂಡು ಹಿಡಿ ಬಿಗಿದು
ಝಳಪಿಸಿದಂತೆ ಕಣ್ಣ ಪ್ರಭೆಗೆ
ದಿಗ್ಭ್ರಮೆಗೊಂಡು ನಿದ್ದೆ ಬರದಿರಲು
ಗಂಟಲೊಣಗಿ ಭಯವ ನುಂಗಿಕೊಂಡೆ
ಖಾಲಿ ಬಿಟ್ಟ ಪುಟಗಳಿಗಿಂತ
ಹರಿದು ಗೊಬ್ಬರವಾದವುಗಳೇ ಲೇಸು
ಇತ್ತ ಏದುಸಿರು ಬಿಡುತ್ತ
ನನ್ನತ್ತ ದಿಟ್ಟಿಸುತ್ತಿವೆ ಒತ್ತ(ಡ)ಕ್ಷರಗಳು
ಪದ್ಯ ಬಿಡಿಸಿ ಹೇಳಲಾಗದು
ಹಾಗೆಂದು ಕಟ್ಟಿ ಹಾಕಲೂ ಕೂಡದು
ಕೆಟ್ಟು ಬರೆದವರೆಷ್ಟು ಮಂದಿಯೋ
ಬರೆದು ಕೆಟ್ಟವರದೆಷ್ಟೋ ....
ಕರೆಯುವ ಮುನ್ನ ಕೈ ಚಾಚಲೇ?
ಕರೆಯುವ ಮುನ್ನ ಕೈ ಚಾಚಲೇ?
ಕೊರಳಲಿ ಏಕೋ ರಗಳೆ
ಮರುಗುವ ಮುನ್ನ ಮಗುವಾಗಲೇ?
ತುಳುಕುವ ಕಣ್ಣು ಕಡಲೇ?
ಅರಿವೇ ಇರದೆ ಅರಸಿ ಬಂದಿರೋ
ಮುಗಿಲ ತಡೆದು ಕರಗು ಎನ್ನಲೇ?
ಮಳೆ ಹನಿ ಹನಿಯೊಂದಕೂ ನಡುಕವಿದೆ
ಎದೆ ಕಡಲಲಲೆಯೊಂದರ ಪರಿಚಯಕೆ
ಬಿರಿವ ಭಯವೇ ದೂರ ಬಯಸಿದೆ..
ಕೊರಳಲಿ ಏಕೋ ರಗಳೆ
ಮರುಗುವ ಮುನ್ನ ಮಗುವಾಗಲೇ?
ತುಳುಕುವ ಕಣ್ಣು ಕಡಲೇ?
ಅರಿವೇ ಇರದೆ ಅರಸಿ ಬಂದಿರೋ
ಮುಗಿಲ ತಡೆದು ಕರಗು ಎನ್ನಲೇ?
ಮಳೆ ಹನಿ ಹನಿಯೊಂದಕೂ ನಡುಕವಿದೆ
ಎದೆ ಕಡಲಲಲೆಯೊಂದರ ಪರಿಚಯಕೆ
ಬಿರಿವ ಭಯವೇ ದೂರ ಬಯಸಿದೆ..
ಇಲ್ಲಿ ಕಾಲವು ಗಡಿಯಾರದ ಗಡಿ ದಾಟಿದೆ
ಹೋರಾಡುತ ಇದ್ದ ಪ್ರಾಣ ಸಾಯುತ್ತಿದೆ
ತನ್ ಮೇಲೆಯೇ ತನಗಾಗಿ ತಾತ್ಸಾರಕೆ
ಈ ಸಂಜೆಯು ತಾನಾಗೇ ಮಂಕಾಗಿದೆ
ಹೋರಾಡುತ ಇದ್ದ ಪ್ರಾಣ ಸಾಯುತ್ತಿದೆ
ತನ್ ಮೇಲೆಯೇ ತನಗಾಗಿ ತಾತ್ಸಾರಕೆ
ಈ ಸಂಜೆಯು ತಾನಾಗೇ ಮಂಕಾಗಿದೆ
ಈ ಗಾಯವಿನ್ನೂ ಹಸಿಯಾಗಿರಲು ನೀ ಮತ್ತೆ
ಇನ್ನೊಂದು ಗಾಯಕ್ಕೆ ಬಯಕೆ ಇಡುವೆ ಮನವೇ, ಸರಿಯೇ?
ಇನ್ನೊಂದು ಗಾಯಕ್ಕೆ ಬಯಕೆ ಇಡುವೆ ಮನವೇ, ಸರಿಯೇ?
ಪದೆ ಪದೆ ಅದೇ ಕಥೆ ಅನಂತವಾಗಿ ಸಾಗಿದೆ
ತರಾತುರಿ ಎಲ್ಲ ಕನಸ್ಸಿನಂತೆ ಉಳಿದು ಬಿಟ್ಟಿದೆ
ಸಮೀಪವನ್ನು ದೂರದಿಂದ ಮೌನದಲ್ಲಿ ಧ್ಯಾನಿಸಿ
ನಿರೂಪಮಾನವಾದ ಲೋಕವೊಂದು ಕೂಗಿ ಕರೆದಿದೆ
ನಿರೀಕ್ಷೆಯೊಂದು ಶಿಕ್ಷೆಯಂತೆ ಕೊಲ್ಲುವಂಥ ವೇಳೆಗೆ
ಪರೀಕ್ಷೆಯಲ್ಲಿ ಕೂತರಲ್ಲಿ ಎಲ್ಲ ಪ್ರಶ್ನೆ ನೀನೇ ಆಗುವೆ ಏಕೆ ನೀ ಹೇಳು...?
ತರಾತುರಿ ಎಲ್ಲ ಕನಸ್ಸಿನಂತೆ ಉಳಿದು ಬಿಟ್ಟಿದೆ
ಸಮೀಪವನ್ನು ದೂರದಿಂದ ಮೌನದಲ್ಲಿ ಧ್ಯಾನಿಸಿ
ನಿರೂಪಮಾನವಾದ ಲೋಕವೊಂದು ಕೂಗಿ ಕರೆದಿದೆ
ನಿರೀಕ್ಷೆಯೊಂದು ಶಿಕ್ಷೆಯಂತೆ ಕೊಲ್ಲುವಂಥ ವೇಳೆಗೆ
ಪರೀಕ್ಷೆಯಲ್ಲಿ ಕೂತರಲ್ಲಿ ಎಲ್ಲ ಪ್ರಶ್ನೆ ನೀನೇ ಆಗುವೆ ಏಕೆ ನೀ ಹೇಳು...?
ಹಾಡಿನ ಕೊಂಡಿ:
https://soundcloud.com/bharath-m-venkataswamy/faitfnzi4a6c
Friday, 1 November 2019
ಕನ್ನಡ... ಕನ್ನಡ... ಕನ್ನಡ
ಶ್ವಾಸ ಶುಚಿಗೊಳಿಸೋ ಭಾಷೆ
ಶಾಸನ ಸಮೃದ್ಧ ಭಾಷೆ
ದ್ವೇಷವನೊಲ್ಲದ ಭಾಷೆ
ಕೋಶಕೆ ಕಲಶದ ಭಾಷೆ
ಕಾವ್ಯ ದಾಸ್ಯಕೊಲಿದ ಭಾಷೆ
ನಿತ್ಯ ನಿರಂತರಮ್ಯ ಭಾಷೆ
ಮೌನದಿ ಝೇಂಕಾರ ಭಾಷೆ
ಅಕ್ಷರಶಃ ಕ್ಷೌಧ್ರ ಭಾಷೆ ....
ಆ ನುಡಿ, ಈ ನುಡಿ
ಏನಾದರೂ ನುಡಿ
ಮುನ್ನುಡಿಯಾಗಿಸು ಕನ್ನಡವ
ಮತ-ಮತಗಳ
ಒಮ್ಮತ ಸೇತುವೆಯಿದು
ವಿಂಗಡಿಸದು ನಮ್ಸಂಗಡವ ...
ಶಾಸನ ಸಮೃದ್ಧ ಭಾಷೆ
ದ್ವೇಷವನೊಲ್ಲದ ಭಾಷೆ
ಕೋಶಕೆ ಕಲಶದ ಭಾಷೆ
ಕಾವ್ಯ ದಾಸ್ಯಕೊಲಿದ ಭಾಷೆ
ನಿತ್ಯ ನಿರಂತರಮ್ಯ ಭಾಷೆ
ಮೌನದಿ ಝೇಂಕಾರ ಭಾಷೆ
ಅಕ್ಷರಶಃ ಕ್ಷೌಧ್ರ ಭಾಷೆ ....
ಆ ನುಡಿ, ಈ ನುಡಿ
ಏನಾದರೂ ನುಡಿ
ಮುನ್ನುಡಿಯಾಗಿಸು ಕನ್ನಡವ
ಮತ-ಮತಗಳ
ಒಮ್ಮತ ಸೇತುವೆಯಿದು
ವಿಂಗಡಿಸದು ನಮ್ಸಂಗಡವ ...
Subscribe to:
Posts (Atom)
ಕರೆವೆ ಮತ್ತೆ ಮತ್ತೆ ಇದೋ
ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...
-
ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ ಯಾವ ಮಾತಿಲ್ಲದೆ, ಮೌನವೇ ಸಾಗಿದೆ ಹೋಗಿ ಬಂದು ನಿಲ್ಲಲಿಲ್ಲ ಎಚ್ಚರಿಸಿ ಕೇಳಲಿಲ್ಲ ನನ್ನಂತ...
-
ಬರುವೆ ನಿನಗಾಗಿ ಇರುವೆ ಜೊತೆಯಾಗಿ ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ ನೀನದೇ ಈ ಹಾಡು ಹಿಡಿದು ಹೊಸ ಜಾಡು ನಾ ಹಾಡುವೆನು ಕೂಡಿ ಬಾ ನೀ ಆದರೆ ಬೆರೆತ ಮನದಲ್ಲಿ ಪುಟಿ...
-
ನಿದ್ದೆಯಿಂದ ಎದ್ದ ನಾನು ಬಿಸಿ ಲೋಟ ಕಾಫಿ ಕಂಡು ಬಾಯಿ ತೊಳೆಯದೇ ಕುಡಿದೆ ಅಲ್ಲಿಗೆ ಹಲ್ಲಿಗೆ ಮೋಸ ಜಳಕದ ಇರಾದೆ ಇರದೆ ಬೊಗಸೆ ನೀರ ಮುಖಕೆ ಚೆಲ್ಲಿ ಮೆತ್ತ...