Tuesday, 7 March 2023

ಇದೋ ನಿನ್ನ ಎದುರು, ಸೋತು ಹೋಗುವೆ

ಇದೋ ನಿನ್ನ ಎದುರು, ಸೋತು ಹೋಗುವೆ 

ಕಣ್ಣಲ್ಲೇ ಇರಿಸು, ನೀರಾಗುವೆ 

ಹೋ.. ಏಕವಾದ ನಡಿಗೆ
ಆದರೇಕೋ ಕೊನೆಗೆ 
ಸಣ್ಣದೊಂದು ದೂರ
ಬೆಳೆದಂತಿದೆ...
ಹೋ.. ಮೂಕವಾಗಿ ಕುಳಿತೂ 
ಏನೋ ಹೇಳಿದಂತೆ 
ಇಬ್ಬನಿಯ ಸಾಲು 
ಶರಣಾಗಿದೆ.. ಹಾಯ್.. 

ಜೊತೆಗೊಂದು ನೆರಳು, ಇರುವಂತೆಯೇ
ಹಿಡಿ ನನ್ನ ಬೆರಳ, ಸಂಗಾತಿಯೇ...
ಇದೋ ನಿನ್ನ ಎದುರು, ಸೋತು ಹೋಗುವೆ 
ನಿನ್ನಲ್ಲಿ ಹರಿವ, ನೀರಾಗುವೆ 

ಹೋ.. ಮಾಯವಾದ ಬೆಳಕು 
ನಿನ್ನ ಹಿಂದೆ ಅವಿತು 
ಚಾಡಿ ಹೇಳಬಹುದು 
ಪಿಸು ಮಾತಲೇ 
ಹೋ.. ಗಾಯ ಮಾಡಿ ನಗುವೆ 
ಏಕೆ ಹೇಳು ಚೆಲುವೆ
ಕಾಡಬೇಡ ದಿನವೂ 
ಬೇಕಂತಲೇ.. ಹಾಯ್.. 

ಗುರಿ ತೋರು ನನಗೆ, ಕಳುವಾಗುವೆ 
ತುಟಿಯಲ್ಲಿ ಕುಳಿತು ಮುಗುಳಾಗುವೆ 
ಇದೋ ನಿನ್ನ ಎದುರು, ಚೂರಾಗುವೆ
ಕಣ್ಣಲ್ಲೇ ಇರಿಸು, ನೀರಾಗುವೆ 

ನೂರಾರು ಕಡಲನ್ನು ನಾ ದಾಟಿ ಬರಬಲ್ಲೆ

ನೂರಾರು ಕಡಲನ್ನು ನಾ ದಾಟಿ ಬರಬಲ್ಲೆ

ನಿನ್ನಲ್ಲಿ ಒಂದಾಗಲು
ಈಗಾಗಲೇ ನಿನ್ನ ಜೆತೆಗೆಂದೇ ಬರೆದಂತೆ
ಈ ಜೀವನ ಮೀಸಲು
ಸಾಕಾರವಾದಂತೆ ರೋಮಾಂಚನ
ಹಿಡಿವಾಗ ನಿನ್ನಲ್ಲಿಯ ಕಂಪನ
ಅನುರಾಗಿ ನಾನಾದೆನು..

ಏನಾಯಿತೆಂದು ಹೇಳೋಕೆ ಬರದೇ 
ನಾ ಮೂಕನಾದಾಗಲೇ 
ಮಾತಾಡು ಎಂದು ಒತ್ತಾಯಿಸೋ ನಿನ್ನ 
ಕಣ್ಣಲ್ಲಿ ಶರಣಾಗುವೆ 
ಯಾಕಾಗಿ ಸಮಯ ಸಾಗೋದು ಮುಂದೆ 
ನಾವಿಬ್ಬರು ಸೇರಲು 
ಈಗಷ್ಟೇ ಬಂದು ಹೊರಡೋದು ಮೋಸ 
ಎನುವಂತೆ ನಾ ಬೇಯುವೆ 

ಬೇರೂರುವೆ ನಾನು ಬೇಕೆಂದರೆ ನಿನ್ನ 
ಮನೆಯಂಗಳ ಚಂದಿರ 
ಈಗೀಗ ಈ ನನ್ನ ಕನಸೆಲ್ಲವೂ ಕೂಡ
ನಿನ್ನಂತೆಯೇ ಸುಂದರ 
ಒಲವೆಂಬುದು ಹೀಗೇ ಸ್ವಾಭಾವಿಕ 
ಸ್ವೀಕಾರವು ಎಷ್ಟು ಮನಮೋಹಕ 
ಅನುರಾಗಿ ನಾನಾದೆನು..

ಅರಮನೆ ಕಟ್ಟಾಗಿದೆ

ಮಾತುಗಳ ಮಣ್ಣಾಗಿಸಿ, ನಂಬಿಕೆಯ  ಹುಸಿಯಾಗಿಸಿ

ಮರಳು ಇಟ್ಟಿಗೆ ಬೆರೆಸಿ - ಅರಮನೆ ಕಟ್ಟಾಗಿದೆ 

ನಾಚಿಕೆಯ ಮರೆಮಾಚಿಸಿ, ಸೇತುಗಳ ಒಡೆದುರುಳಿಸಿ 
ಪಾತಿಯಲಿ ವಿಷ ತುಂಬಿಸಿ - ಅರಮನೆ ಕಟ್ಟಾಗಿದೆ 

ಎಷ್ಟೋ ಕನಸನು ಸುಟ್ಟು, ಪಾಯ ಅಡಿಯಲ್ಲಿ ಇಟ್ಟು 
ಗೋಡೆ ಗಡಿಯನು ನೆಟ್ಟು - ಅರಮನೆ ಕಟ್ಟಾಗಿದೆ 

ಬಣ್ಣದ ಭ್ರಮೆಯ ಬಳಸಿ, ಮೋಸದ ಮಸಿಯ ಮೆತ್ತಿಸಿ 
ವೇಷವ ಕಳಚಿದ ದೆಸೆಯಲಿ - ಅರಮನೆ ಕಟ್ಟಾಗಿದೆ 

ಮಿಡಿವ ಮನಸುಗಳನ್ನು, ಮುರಿದ ಮತ್ಸರದಲ್ಲಿ 
ಹೊಳೆವ ಗಾಜುಗಳಲ್ಲಿ - ಅರಮನೆ ಕಟ್ಟಾಗಿದೆ

ಕಪಟ ಕಣ್ಣೆದುರಿದ್ದೂ, ಏನೂ ಅರಿಯದ ಹಾಗೆ 
ನಗುವ ದೇವರ ಸ್ಥಾಪಿಸಿ - ಅರಮನೆ ಕಟ್ಟಾಗಿದೆ

ಕಣ್ಣ ಸೆಳೆಯುವ ಬೆಳಗು, ದೀಪಾಲಂಕಾರ ಬೆರಗು
ಸರಳತೆ ಶರಣಾಗುವಂತೆ - ಅರಮನೆ ಕಟ್ಟಾಗಿದೆ  

ಯಾರು ಯಾರಿಗೂ ಅಲ್ಲ, ಇಲ್ಲಿ ಸ್ವಾರ್ಥವೇ ಎಲ್ಲ 
ಎಂಬ ಪಾಠವ ಕಲಿಸೋ - ಅರಮನೆ ಕಟ್ಟಾಗಿದೆ 

ಮುರಿದಂಥ ಹಡಗು

ಮುರಿದಂಥ ಹಡಗು

ತೇಲಬೇಕಿದೆ
ಉರಿದಷ್ಟೂ ಹಣತೆ

ಮುರಿದಲ್ಲೇ ಮನಸು
ಕೂಡಬೇಕಿದೆ
ಉರಿದಷ್ಟೂ ಕವಿತೆ
ಬೆಳಕಾಗಿದೆ 

ಕಣ್ಣು ತುಂಬಿ ಬರುವ 
ವೇಳೆಯಲ್ಲಿ ಇರಲಿ 
ನೋವಿಗೂನೂ ಜಾಗ ಆನಂದದಿ 

ಜೋರು ಮಳೆಯು ಈಗ ನನ್ನ ನಿನ್ನ ಒಂದು ಮಾಡಿದೆ

ಜೋರು ಮಳೆಯು ಈಗ ನನ್ನ ನಿನ್ನ ಒಂದು ಮಾಡಿದೆ

ಒಂದೇ ಕೊಡೆಯ ಕೆಳಗೆ ನಮ್ಮ ಪಯಣ ಮುಂದೆ ಸಾಗಿದೆ (ಮುಂದುವರೆದಿದೆ)
ಏನೂ ಹೇಳಲಾಗದೆ, ಮನಸ್ಸು ಇನ್ನೂ ಚೂರು ಮಾಗಿದಂತಿದೆ
ಮೂಡದೆ ಸತಾಯಿಸೋ, ಮಾತು ತಾನೇ ಮಂದಹಾಸವಾಗಿದೆ 
ಎಲ್ಲ ಭಿನ್ನವಾಗಿದೆ, ಪ್ರೀತಿ ಆಗೋ ಹಾಗಿದೆ...

ಕಣ್ಣಲ್ಲಿ ಗುಂಡಿಕ್ಕಿ ಕೊಲ್ಲುವಂಥ ನಿನ್ನ ನೋಟಕೆ
ನನ್ನಲ್ಲಿ ನೂರಾರು ಹೊಂಬಣ್ಣ ಮೂಡಿ ಬಂದಿದೆ
ನೀನೆಲ್ಲೇ ಹೋದಾಗ ನಾನಲ್ಲೇ ಹಾಜರಾದರೆ
ನೀನೇಕೆ‌ ಸಾಗೋದು ಬೇಕಂತ ನನ್ನ ನೋಡದೆ

ಕೂಸೇ, ನನ್ನಪ್ಪ ನೀನು

ಗೊಣ್ಣೆ ಸೋರ್ಸ್ಕೊಂಡ್ ಅಪ್ಪಂಗೇ

ಅಪ್ಣೆ ಮಾಡೋ ಮಗ್ನೇ
ನಿಂಗಿಂತ ವೈಸಲಿ ದೊಡ್ಡೋನು
ಮರ್ಯಾದೆನೇ ಇಲ್ವಲ್ಲೋ

ಕಕ್ಕ ಮಾಡಿ ಅಂಡು ತೊಳ್ಯೋಕೂ
ನನ್ನೇ ಕರೆಯವ್ನು
ಮುತ್ತು ಕೊಟ್ಟಾಗ್ ಮೆತ್ತಿದ್ ಎಂಜ್ಲು
ಗಲೀಜು ಅಂದ್ಯಲ್ಲೋ

ಕೈ ಹಿಡ್ದು ನಡಿಯೋ ಅಂದ್ರೆ
ನೋಡೋರ್ ಮುಂದೆ ಬಿಂಕ
ಬಿದ್ದು ಮಂಡಿ ಗಾಯ ಆದ್ರೆ
ನಂಗೇ ಹೊಡೆದ್ಯಲ್ಲೋ

"ನಾನೇನು ಇನ್ನೂ ಮಗುನಾ?" ಅಂತ
ಜಂಬ ನಿನ್ನಲ್ಲಿದ್ರೂ
ಗುಮ್ಮ ಬಂದ ಅಂದ್ರೆ ಸಾಕು
ಅತ್ತು ಕರ್ದ್ಯಲ್ಲೋ

ಎಲ್ಲ ಗೊತ್ತು ಅಂತೀಯ
ಹೇಳ್ಕೊಡೋಕೋದ್ರೆ ಬೈತೀಯ
ಪ್ರಶ್ನೆ ನಿಂದು, ಉತ್ರ ನಿಂದು
ಜಾಣನಾದ್ಯಲ್ಲೋ

ಆಟ ಆಡ್ಸು ‌ಆಡ್ತೀನಿ
ಏನೇ ಹೇಳು ಮಾಡ್ತೀನಿ
ಮಾತಿಗ್ ಮಾತು ಬೆರ್ಸಿ ನನ್ನ
ಸೋಲ್ಸೇ ಬಿಟ್ಯಲ್ಲೋ

ಕೂಸೇ, ನನ್ನಪ್ಪ ನೀನು
ನಾನಪ್ಪ, ಆದ್ರೂ ಕೂಸು
ನಾವಿಬ್ರೂ ಒಂದೇ ಅಂತ 
ತೋರ್ಸ್ಕೊಟ್ಯಲ್ಲೋ!

Thursday, 15 December 2022

ಬರುವೆ ತುಸುವೇ ದೂರ

ಬರುವೆ ತುಸುವೇ ದೂರ

ಸಲುಗೆ ಬಯಸಿ ಪೂರ
ಇದೇ ಶುಭ ಸೂಚನೆಯೋ
ಒಲವ ಸವಿ ಭಾವನೆಯೋ
ಮನದ ಕರೆಯೋಲೆಯಿದು
ಬರುವೆ ತುಸುವೇ ದೂರ
ಸಲುಗೆ ಬಯಸಿ ಪೂರ

ನನ್ನಲ್ಲೊಂದು ಕವಿತೆ ಸಾಲು
ಬಾಕಿಯಿದೆ ನಿನಗಾಗಿ
ಹೇಳಿ ಬಿಡುವೆ ಚೂರು ತಾಳು
ಮೂಡುವುದು ಹಿತವಾಗಿ
ನೀನಿರದೇ ಹೇ.. 
ಹೇಗಿರಲಿ ಹೇಳೆ ಸಖಿ
ಸುಖದ ಸಮಪಾಲಿಡುವೆ
ಅಳುವೇ ಬರದಾಗಿಸುವೆ
ಮನದ ಅಭಿಲಾಷೆಯಿದು
ಬರುವೆ ತುಸುವೇ ದೂರ
ಸಲುಗೆ ಬಯಸಿ ಪೂರ

ಮರೆತು ಬಿಡುವೆ ನನ್ನೇ ನಾನು
ಪರಿಚಯಿಸು ಹೊಸತಾಗಿ
ನಿನಗೂ ನನಗೂ ಒಂದೇ ರೀತಿ
ಪ್ರೇಮ ಜ್ವರ ಶುರುವಾಗಿ
ದಾರಿಗಳು ಊ.. 
ನೂರಾರಿವೆ ಸಾಗಿರಲು
ಅನುಭವಿಸಿದೆ ಹೃದಯ
ಪ್ರಣಯ ಕಲಿಸೋ ವಿಷಯ
ಮನದ ಪರಿಪಾಟಲಿದು..
ಬರುವೆ ತುಸುವೇ ದೂರ
ಸಲುಗೆ ಬಯಸಿ ಪೂರ

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...