ಆಗಷ್ಟೇ ಜನಿಸಿದ ಮರಿ ಕೋಣ
ಬಿದ್ದ ಕಸದ ಅಂಟಿಗೆ
ಜಾರಿ ಜಾರಿ ಮುಗ್ಗರಿಸಿ ಕೊನೆಗೆ
ತನ್ನ ಕಾಲ ಮೇಲೆ ತಾನೇ ನಿಂತು
ಕುಡಿದ ಅಮಲಲ್ಲಿ ತೂರಾಡಿದಂತೆ
ಎತ್ತೆತ್ತಲೋ ಅಡ್ಡಾದಿಡ್ಡಿ ಹೆಜ್ಜೆ ಇಟ್ಟಿತು
ಕೆಚ್ಚಲು ಎಲ್ಲಿದ್ದಿತೆಂದು,
ಗೊತ್ತಿದ್ದರೂ ಹೇಗೆ ಗುದ್ದಿ ಹಾಲು ತೆಗೆವುದೆಂದು
ಹೇಳಿ ಕೊಟ್ಟವರಾರು ಪಾಪ!!
ತಾಯಿ ಎಮ್ಮೆ ಮೈಯ್ಯೆಲ್ಲ ನೆಕ್ಕಿ
ಶುಚಿಗೊಳಿಸುವಾಗಲೇ
ಮರಿಯ ಹೊಟ್ಟೆಯಲಿ ಸಂಕಟ
ಹಸಿವಿನ ಮೊದಲ ಕರೆ
ಮೂಗುದಾರ ಬಿಗಿದ ಎಮ್ಮೆ
ಮರಿಗೆ ಕೆಚ್ಚಲ ದಾರಿ ಹೇಗೆ ತೋರೀತು?
ಮುಂಗಾಲಿನಿಂದ ಮೆಲ್ಲಗೆ ಒದ್ದು
ಹಿಂಗಾಲಿನತ್ತ ನೂಕುತ್ತದೆ
ಬಾಯಿಗೆ ಮೊಲೆಯಿರಿಸಲಾರದ
ಅಸಹಾಯಕ ತಾಯಿ
ಕಂದ ಸ್ವಾವಲಂಬಿಯಾಗಲು ಕಾಯುತ್ತದೆ
ಹಸಿವು ಎಂಥವರಿಗೂ ಪಾಠ ಕಲಿಸುತ್ತೆ ನೋಡಿ
ಎಳೆಗಣ್ಣು ಕೊನೆಗೂ ಕೆಚ್ಚಲ ಪತ್ತೆಹಚ್ಚಿ
ಗಿಣ್ಣುಹಾಲನ್ನ ಗಂಟಲಿಗಿಳಿಸುತ್ತಿದ್ದಂತೆ
ಕಾಲುಗಳು ಮತ್ತಷ್ಟು ದೃಢವಾಗುತ್ತವೆ
ಕೋಣನ ಕೊರಳಿಗೀಗ ಹಗ್ಗ ಬಿಗಿದು
ದೂರ ಕಟ್ಟಿಹಾಕಲ್ಪಡುತ್ತದೆ!!
ಬಾಣಂತಿ ಬಟ್ಟಲ ತುಂಬ ಕೊಟ್ಟು
ಕೋಣಕ್ಕಿಷ್ಟು ಉಳಿಸಿಕೊಂಡರೆ
ಅದೇ ಕರುಳಿಗೆ ಹಬ್ಬ,
ಮತ್ತೆ ಹಾಲು ಹಿಂಡುವ ಹೊತ್ತಿಗೆ
ಎರಡೂ ಜೀವಗಳು ತುಡಿಯುತ್ತವೆ
ಮಾರು ದೂರದಿಂದ!!
-- ರತ್ನಸುತ
ಬಿದ್ದ ಕಸದ ಅಂಟಿಗೆ
ಜಾರಿ ಜಾರಿ ಮುಗ್ಗರಿಸಿ ಕೊನೆಗೆ
ತನ್ನ ಕಾಲ ಮೇಲೆ ತಾನೇ ನಿಂತು
ಕುಡಿದ ಅಮಲಲ್ಲಿ ತೂರಾಡಿದಂತೆ
ಎತ್ತೆತ್ತಲೋ ಅಡ್ಡಾದಿಡ್ಡಿ ಹೆಜ್ಜೆ ಇಟ್ಟಿತು
ಕೆಚ್ಚಲು ಎಲ್ಲಿದ್ದಿತೆಂದು,
ಗೊತ್ತಿದ್ದರೂ ಹೇಗೆ ಗುದ್ದಿ ಹಾಲು ತೆಗೆವುದೆಂದು
ಹೇಳಿ ಕೊಟ್ಟವರಾರು ಪಾಪ!!
ತಾಯಿ ಎಮ್ಮೆ ಮೈಯ್ಯೆಲ್ಲ ನೆಕ್ಕಿ
ಶುಚಿಗೊಳಿಸುವಾಗಲೇ
ಮರಿಯ ಹೊಟ್ಟೆಯಲಿ ಸಂಕಟ
ಹಸಿವಿನ ಮೊದಲ ಕರೆ
ಮೂಗುದಾರ ಬಿಗಿದ ಎಮ್ಮೆ
ಮರಿಗೆ ಕೆಚ್ಚಲ ದಾರಿ ಹೇಗೆ ತೋರೀತು?
ಮುಂಗಾಲಿನಿಂದ ಮೆಲ್ಲಗೆ ಒದ್ದು
ಹಿಂಗಾಲಿನತ್ತ ನೂಕುತ್ತದೆ
ಬಾಯಿಗೆ ಮೊಲೆಯಿರಿಸಲಾರದ
ಅಸಹಾಯಕ ತಾಯಿ
ಕಂದ ಸ್ವಾವಲಂಬಿಯಾಗಲು ಕಾಯುತ್ತದೆ
ಹಸಿವು ಎಂಥವರಿಗೂ ಪಾಠ ಕಲಿಸುತ್ತೆ ನೋಡಿ
ಎಳೆಗಣ್ಣು ಕೊನೆಗೂ ಕೆಚ್ಚಲ ಪತ್ತೆಹಚ್ಚಿ
ಗಿಣ್ಣುಹಾಲನ್ನ ಗಂಟಲಿಗಿಳಿಸುತ್ತಿದ್ದಂತೆ
ಕಾಲುಗಳು ಮತ್ತಷ್ಟು ದೃಢವಾಗುತ್ತವೆ
ಕೋಣನ ಕೊರಳಿಗೀಗ ಹಗ್ಗ ಬಿಗಿದು
ದೂರ ಕಟ್ಟಿಹಾಕಲ್ಪಡುತ್ತದೆ!!
ಬಾಣಂತಿ ಬಟ್ಟಲ ತುಂಬ ಕೊಟ್ಟು
ಕೋಣಕ್ಕಿಷ್ಟು ಉಳಿಸಿಕೊಂಡರೆ
ಅದೇ ಕರುಳಿಗೆ ಹಬ್ಬ,
ಮತ್ತೆ ಹಾಲು ಹಿಂಡುವ ಹೊತ್ತಿಗೆ
ಎರಡೂ ಜೀವಗಳು ತುಡಿಯುತ್ತವೆ
ಮಾರು ದೂರದಿಂದ!!
-- ರತ್ನಸುತ
No comments:
Post a Comment